ಮತ್ತೆ ಒಡೆದು ಹೋಳಾಗತ್ತ ಭಾರತೀಯ ಜನತಾ ಪಾರ್ಟಿ??

ಮತ್ತೆ ಒಡೆದು ಹೋಳಾಗತ್ತ ಭಾರತೀಯ ಜನತಾ ಪಾರ್ಟಿ??

ಹೌದು, ಈ ರೀತಿ ಸುದ್ದಿಯೊಂದು ವಿಧಾನ ಸೌಧದ ಗಲ್ಲಿಗಳಲ್ಲಿ ಗಿರಕಿ ಹೊಡೆಯುತ್ತಿದೆ. ಏನಿದರ ಸತ್ಯಾಂಶ ಎಂದು ಹುಡುಕಿ ಹೊರಟಾಗ, ಕಂಡಂತ ಕೆಲ ಸುದ್ದಿ ಸಮಾಚಾರ ಇಲ್ಲಿದೆ ನೋಡಿ.

ರಾಜ್ಯ ಬಿಜೆಪಿ ಬಗ್ಗೆ ನಮ್ಮ ಜನರಿಗೆ ಹೊಸದಾಗಿ ಹೇಳೋದಕ್ಕೆ ಏನಿಲ್ಲ, ಎಲ್ಲವೂ ಖುಲ್ಲಂಖುಲ್ಲಾ ಗೊತ್ತಿರೋ ವಿಚಾರಗಳೇ! ಈ ಹಿಂದೆ ಅಧಿಕಾರವಿದ್ದಾಗ ಆಡಳಿತ ನೆಡೆಸೋದಕ್ಕಿಂತ ಹೆಚ್ಚು ಪಕ್ಷ ಬಣ ರಾಜಕೀಯ ಶಮನಗೊಳಿಸೋದೇ ಮಹತ್ವದ ಕಾರ್ಯವಾಗಿತ್ತು, ಇದಕ್ಕೆ ಪೂರಕವಾಗಿ ವಾರಕೊಮ್ಮೆಯಾದ್ರೂ ರೆಸಾರ್ಟ್ ಕಡೆ ಮುಖ ಮಾಡುತ್ತಿದ್ರೂ ನಮ್ಮ ಬಿಜೆಪಿ ನಾಯಕರು. ರೆಡ್ಡಿ ಬಣ, ಶೆಟ್ಟರ್ ಬಣ, ಶಿವಣ್ಣ ನಾಯ್ಕ್ ಬಣ, ರೇಣುಕಾಚಾರ್ಯ ಬಣ, ಅನಂತ್ ಕುಮಾರ ಬಣ ಅಂತ ಒಂದೇ ಪಕ್ಷ ನಾಲ್ಕೈದು ಬಣ ಹೊಂದಿದ್ದ ಏಕೈಕ ಪಕ್ಷ ಇದು.

 

 

Image result for bjp split

 

 

ಈಗ ಮತ್ತೆ ಏಕೆ ಹೋಳಾಗೋ ಪ್ರಶ್ನೆ ಅನ್ನೋದಾದ್ರೆ, ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ ಹಾಗು ಚುನಾವಣಾ ಪೂರ್ವ ಸಮೀಕ್ಷೆಗಳು. ಎಲ್ಲಾ ಚುನವಣಾ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರೋದಿಲ್ಲ ಅಂತ ಈಗಾಗಲೇ ಜಗತ್ತು ಜಾಹಿರವಾಗಿದೆ ಅದರ ಮೇಲೆ ೧೫ ದಿನಕೊಮ್ಮೆ ರಾಜಕೀಯ ವ್ಯಾಪಾರಸ್ಥ ಅಮಿತ್ ಷಾ ಬಂದು ಶಾಲಾ ಮಕ್ಕಳಿಗೆ ಪಾಠ ಮಾಡೋ ರೀತಿ ಎಷ್ಟೋ ಮಂದಿಗೆ ಇರುಸು ಮುರುಸು ಆಗಿದ್ರು ಹೇಗೋ ಒಂದೊಂದು ದಿನ ಮುಂದೆ ಹಾಕಿದ್ದಾರೆ. ಈ ಚುನಾವಣಾ ಪೂರ್ವ ಸಮೀಕ್ಷೆ ನಿಜ ಆಗೋದು ಪಕ್ಕ ಅನ್ನೋದು ಸ್ವತಃ ಯಡಿಯೂರಪ್ಪನಿಗೂ ಗೊತ್ತಿರೋ ವಿಚಾರ, ಏಕೆಂದರೆ ಏನು ನೋಡಿ ಕರ್ನಾಟಕ ಜನ ಬಿಜೆಪಿ ಈ ಸಾರಿ ಮತ ಹಾಕಬೇಕು ಎಂದು ಕೇಳಿದರೆ ಮೋದಿ ಅನ್ನೋ ಒಂದು ಪದ ಬಿಟ್ಟು ಬೇರೆ ಏನು ಇಲ್ಲ ಇವರ ಬಳಿ, ಹೋಗಲಿ ಆ ಮೋದಿ ಅನ್ನೋ ಪದ ಆದರು ಕೆಲಸ ಮಾಡ್ತಿದ್ಯಾ? ಅದೂ ಕೂಡ ಈಗ ತನ್ನ ವರ್ಚ್ಚಸು ಕಳೆದುಕೊಂಡು ಮೂಲೆ ಕುಳಿತಾಗಿದೆ. ಕೊಟ್ಟ ೫ ವರ್ಷ ನೆಟ್ಟಗೆ ಆಡಳಿತ ಮಾಡಿದ್ರೆ ಇಂದು ಅದನ್ನು ಹೇಳಿಕೊಂಡು ನೋಡಿ ಇದು ನಮ್ಮ ೫ ವರ್ಷದ ಸಾಧನೆ ಇದನ್ನು ನೋಡಿ ಮತ ಹಾಕಿ ಅಂತ ಕೇಳಾದ್ರು ಕೇಳಬಹುದಿತ್ತು, ಆದ್ರೆ ಇವು ಅದೂ ಮಾಡಲಿಲ್ವೆ! ಕೊಟ್ಟ ಸುವರ್ಣ ಅವಕಾಶ ಕೈ ಚಲ್ಲಿ, ಕಾಂಗ್ರೆಸ್ ಗೆ ಅಧಿಕಾರ ಉಡುಗೊರೆಯಾಗಿ ಕೊಟ್ಟ ಕೀರ್ತಿ ನಮ್ಮ ರಾಜ್ಯ ಬಿಜೆಪಿಯದ್ದು.

 

No automatic alt text available.

ಸಮೀಕ್ಷೆ ಪ್ರಕಾರ ಅತಂತ್ರ ಅಗೋದೇನೋ ಪಕ್ಕ, ಆದ್ರೆ ಮೈತ್ರಿ ಯಾವ ಯಾವ ಪಕ್ಷದ ನಡುವೆ ಅನ್ನೋದೇ ಯಕ್ಷ ಪ್ರಶ್ನೆ! ಕಾಂಗ್ರೆಸ್ ಏನೋ ಬಿಜೆಪಿ ಜೆಡಿಎಸ್ ಮೈತ್ರಿ ಎಂಬ ಒಂದು ಸುಳ್ಳು ಸುದ್ದಿಯನ್ನು ಹರಿ ಬಿಟ್ಟು, ಅಲ್ಪ ಸಂಖ್ಯಾತ ಮತಗಳನ್ನು ಹಿಡಿದಿಟ್ಟುಕೊಳ್ಳೋ ಸರ್ವ ಪ್ರಯತ್ನಕ್ಕೆ ಕೈ ಹಾಕಿದೆ ಆದ್ರೆ ಸ್ವತಃ ದೇವೇಗೌಡರು ಹಾಗು ಕುಮಾರಸ್ವಾಮಿ ಅವರು ಈ ಸಾಧ್ಯತೆಯನ್ನು ತಳ್ಳಿ ಹಾಕಿರುವರು. ಇದು ಬಿಟ್ಟು ಮೈತ್ರಿ ಆಗೋ ಸಾಧ್ಯತೆ ಇರೋದು ಕಾಂಗ್ರೆಸ್ ಹಾಗು ಜೆಡಿಎಸ್ ನಡುವೆ, ಆದ್ರೆ ಜೆಡಿಎಸ್ ರೆಬೆಲ್ ಶಾಸಕರ ಕಾಂಗ್ರೆಸ್ ಸೇರ್ಪಡೆ ಹಾಗು ಸಿದ್ದರಾಮಯ್ಯ ಅವರ ನಾಲಿಗೆಯೇ ಇಲ್ಲಿ ತಡೆಗೋಡೆಯಾಗಿರೋದು ಸುಳ್ಳಲ್ಲ. ಬಿಜೆಪಿ ಜೆಡಿಎಸ್ ಮೈತ್ರಿಯು ಇಲ್ಲ, ಕಾಂಗ್ರೆಸ್ ಜೆಡಿಎಸ್ ಮೈತ್ರಿಯು ಇಲ್ಲ ಹಾಗಾದ್ರೆ ಸರ್ಕಾರ ರಚನೆ ಆಗೋದಾದ್ರೂ ಹೇಗೆ ಅಂತ ಯೋಚಿಸೋ ಮುನ್ನ ಇಲ್ಲಿದೆ ನೋಡಿ ದೊಡ್ಡಗೌಡರ ಮಾಸ್ಟರ್ ಪ್ಲಾನ್, ಬಿಜೆಪಿಯಲ್ಲಿ ಎಷ್ಟೋ ನಾಯಕರು ಸ್ವಂತ ವರ್ಚಸ್ಸಿನಲ್ಲಿ ಗೆದ್ದು ಬರೋ ಸಾಮರ್ಥ್ಯ ಉಳ್ಳವರು, ಅವ್ರೆಲ್ಲ ಈಗಾಗಲೇ ಕನಿಷ್ಠ ಮೂರು ಬಾರಿ ಶಾಸಕರಾಗಿ ಮಂತ್ರಿಯಾಗೋ ಎಲ್ಲಾ ಅರ್ಹತೆ ಉಳ್ಳವರು, ಅಂತಹ ಕೆಲ ನಾಯಕರು ಈಗಾಗಲೇ ಬಿಜೆಪಿಯಲ್ಲೇ ಇದ್ದು ಜನತಾ ದಳದ ನಾಯಕರ ಜೊತೆ ಮಾತುಕತೆ ನೆಡೆಸುತ್ತಿರೋ ಸುದ್ದಿ ಆಗಿದೆ. ಒಂದು ಪಕ್ಷ ಅವರು ಈಗಲೇ ಪಕ್ಷ ಬಿಟ್ಟು ಜೆಡಿಎಸ್ ಸೇರ್ಪಡೆಯಾದರೆ, ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ತಾನು ಗೆಲ್ಲದೇ ಹೋದರು ಇವರನ್ನು ಸೋಲಿಸಬೇಕು ಎಂದು ಬಿಜೆಪಿ ಪಣ ತೊಟ್ಟರೆ ಆಗ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದ್ದು, ಅದಕ್ಕೆ ಅವಕಾಶ ಕೊಡದೆ ಬಿಜೆಪಿಯಲ್ಲೇ ಇದ್ದು ಗೆದ್ದು ಬನ್ನಿ, ಫಲಿತಾಂಶದ ನಂತರ ತಮ್ಮ ಬೆಂಬಲಿಗರ ಶಕ್ತಿ ಪ್ರದರ್ಶನ ಮಾಡಿ ಪಕ್ಷದಿಂದ ಹೊರ ಬಂದು, ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳಿ ಆಗ ಒಳ್ಳೆ ಮಂತ್ರಿ ಪದವಿಯು ಸಿಕ್ಕಂತಾಗುವುದು, ಜೊತೆಯಲ್ಲಿ ಯಾರ ಹಂಗು ಇಲ್ಲದೆ ಆರಾಮಾಗಿ ಇರಬಹುದು ಎಂಬುದು ಸಧ್ಯದ ಲೆಕ್ಕಾಚಾರ. ಈ ಕೆಲಸ ಬಿಜೆಪಿ ಹೋಳು ಮಾಡದೇ ಕೂಡ ಮಾಡಬಹುದಲ್ಲ ಎಂಬ ಸಂಶಯ ನಿಮಗೆ ಬರಬಹುದು, ಅಲ್ಲೇ ಇರೋದು ನೋಡಿ ವಿಷಯ. ಬಿಜೆಪಿ ಹಂಗಿನಲ್ಲಿದ್ದರೆ ದೊಡ್ಡಗೌಡರು ಯಾವುದೇ ಕಾರಣಕ್ಕೂ ಮೈತ್ರಿಗೆ ಒಪ್ಪುವುದಿಲ್ಲ, ಅದಲ್ಲದೆ ಅಂತ ಮೈತ್ರಿಯಲ್ಲಿ ಅಮಿತ್ ಷಾ ತಲೆ ಹಾಕಿ ಪ್ರಮುಖ ಖಾತೆಗಳನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳೋ ಪ್ರಯತ್ನ ಮಾಡುವುದು ಖಂಡಿತ ಆಗ ಎಲ್ಲೋ ಮೂರ್ನಾಕ್ಕೂ ಪ್ರಮುಖ ನಾಯಕರಿಗೆ ಒಳ್ಳೆ ಖಾತೆ ಸಿಗಬಹುದು ನಂತರ ಮಿಕ್ಕ ನಾಯಕರಿಗೆ ಕೆಲಸಕ್ಕೆ ಬಾರದ ಖಾತೆ ಅಥವಾ ಪ್ರಾಧಿಕಾರ ಮಂಡಳಿ ಅಧ್ಯಕ್ಷ ಸ್ಥಾನವೇ ಗತಿ. ಜೊತೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾದ ನಾಯಕರ ಆಪ್ತರೊಬ್ಬರು ಎಲ್ಲಾ ವಿಷಯಕ್ಕೂ ತಲೆ ಹಾಕಿ ಈಗಾಗಲೇ ಎಷ್ಟೋ ಇತರೆ ನಾಯಕರ ಕೆಂಗಣ್ಣಿಗೆ ಗುರಿಯಾಗಿರೋದು ಸುಳ್ಳಲ್ಲ. ಅದೇ ಆ ನಾಯಕರು ಬಿಜೆಪಿ ಹೋಳು ಮಾಡಿ ಹೊರ ಬಂದರೆ ಆಗ ಪ್ರಮುಖ ಖಾತೆಗಳು ಇವರ ಬುಟ್ಟಿಗೆ ಜೊತೆಯಲ್ಲಿ ಪ್ರಾಧಿಕಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೂಡ. ಹಾಗೇ ಜನತಾ ದಳಕ್ಕೆ ಹಾವು ಸಾಯಬೇಕು ಕೋಲು ಮುರಿಯಬಾರದು ಎಂಬ ಗಾದೆ ಸತ್ಯವಾಗತ್ತೆ, ಒಂದು ಕಡೆ ಕಾಂಗ್ರೆಸ್ ಬಿಜೆಪಿ ಎರಡನ್ನು ಅಧಿಕಾರದಿಂದ ದೂರವಿಟ್ಟು ಅವರ ಸೊಕ್ಕು ಮುರಿದರೆ, ತನ್ನ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಹಾಗು ಆಡಳಿತ ಯಾರ ಹಂಗಲ್ಲೂ ನೆಡೆಸೋ ಪ್ರಮೇಯವೇ ಇಲ್ಲದಂತಾಗುವುದು. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈಗಾಗಲೇ ೨೦ – ೨೫ ಮಂದಿ ಗೆಲ್ಲೊ ಕುದುರೆಗಳು ಜೆ.ಪಿ.ಭವನದ ನಾಯಕರ ಜೊತೆ ಒಂದು ಸುತ್ತು ಮಾತುಕತೆ ನೆಡೆಸಿದ್ದಾರೆ, ಇನ್ನಷ್ಟು ಸಂಖ್ಯಾಬಲ ಏರಿಸೋ ತೆರೆ ಮರೆ ಕಾರ್ಯ ನೆಡೆದಿದೆ, ಸಂಖ್ಯಾಬಲ ಕಡಿಮೆ ಬಿದ್ದಲ್ಲಿ ಕಾಂಗ್ರೆಸ್ ನ ಕೆಲ ನಾಯಕರು ಇದಕ್ಕೆ ಕೈ ಜೋಡಿಸಿದರೆ ಆಶ್ಚರ್ಯ ಪಡುವ ಆಗಿಲ್ಲ. ೫೫ ವರ್ಷ ರಾಜಕೀಯ ಮಾಡಿರೋ ದೊಡ್ಡಗೌಡರ ಈ ನೆಡೆ ಎಂತ ರಾಜಕೀಯ ಚಾಣಾಕ್ಷನನ್ನು ನಡು ಬೀದಿಯಲ್ಲಿ ನಿಲ್ಲಿಸೋದು ಖಂಡಿತ.

ಏನೇ ಆದರೂ ಸರಿ ಕರುನಾಡು ಈ ಬಾರಿ ಒಂದು ಯೋಗ್ಯ ನಾಯಕತ್ವದಲ್ಲಿ ಮುಂದುವರೆಯೋದು ಸಂತಸದ ವಿಷಯ.

One thought on “ಮತ್ತೆ ಒಡೆದು ಹೋಳಾಗತ್ತ ಭಾರತೀಯ ಜನತಾ ಪಾರ್ಟಿ??

  1. Gv varadaraju says:

    Sooryavamshada nayakathva beku

Leave a Reply