ಖಡಕ್ ಪೊಲೀಸ್ ಅಧಿಕಾರಿಯ ಮಸ್ತ್ ಲುಕ್ನಲ್ಲಿ ದೀಪಿಕಾ

ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಜನವರಿ 25ಕ್ಕೆ ಚಿತ್ರ ರಿಲೀಸ್ ಮಾಡಲು ಸಿದ್ಧತೆಯೇನೋ ನಡೆದಿದೆ. ಆದ್ರೆ ಗುಜರಾತ್, ರಾಜಸ್ತಾನ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಐತಿಹಾಸಿಕ ಚಿತ್ರಕ್ಕೆ ನಿಷೇಧ ಹೇರಲಾಗಿದೆ.

ದೀಪಿಕಾ ಮಾತ್ರ ಈ ವಿವಾದಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಳೆ. ಸದ್ಯ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿರೋದು ದೀಪಿಯ ಹೊಸ ಅವತಾರ. ಖಡಕ್ ಪೊಲೀಸ್ ಅಧಿಕಾರಿಯ ಮಸ್ತ್ ಲುಕ್.

ಬಿಳಿ ಶರ್ಟ್, ಖಾಕಿ ಪ್ಯಾಂಟ್, ಕೂಲಿಂಗ್ ಗ್ಲಾಸ್ ತೊಟ್ಟು ಕಾರಿನ ಬಾನೆಟ್ ಮೇಲೆ ದೀಪಿಕಾ ಪವಡಿಸಿರೋ ಫೋಟೋ ವೈರಲ್ ಆಗಿದೆ. ಜಾಹೀರಾತೊಂದರಲ್ಲಿ ದೀಪಿಕಾ ಸಂಚಾರಿ ಪೊಲೀಸ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾಳೆ. ಇದರ ಶೂಟಿಂಗ್ ಮುಂಬೈನಲ್ಲಿ ನಡೀತು.

ಕೃಪೆ : ಕನ್ನಡ ದುನಿಯಾ

Leave a Reply