ರೊಮ್ಯಾಂಟಿಕ್ ಕಪಲ್ ಗಾಗಿಯೇ ಹೊಸ ಸ್ಕ್ರಿಪ್ಟ್

ಬಾಹುಬಲಿ ಚಿತ್ರದ ಮೂಲಕ ಎಲ್ಲರ ಮನಗೆದ್ದಿರುವ ಫೇವರಿಟ್ ಜೋಡಿ ಅಂದ್ರೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ. ಮತ್ತೊಮ್ಮೆ ಇವರಿಬ್ಬರ ಕೆಮೆಸ್ಟ್ರಿಯನ್ನು ತೆರೆ ಮೇಲೆ ನೋಡಬೇಕು ಅಂತಾ ಅಭಿಮಾನಿಗಳು ಆಸೆಪಟ್ಟಿದ್ದರು. ಆದ್ರೆ ಸಾಹೋ ಚಿತ್ರಕ್ಕೆ ಶ್ರದ್ಧಾ ಕಪೂರ್ ನಾಯಕಿಯಾಗಿದ್ದರಿಂದ ಫ್ಯಾನ್ಸ್ ಗೆ ನಿರಾಸೆಯಾಗಿತ್ತು.

ಆದ್ರೀಗ ಈ ರೊಮ್ಯಾಂಟಿಕ್ ಕಪಲ್ ಗಾಗಿಯೇ ಸ್ಕ್ರಿಪ್ಟ್ ಒಂದು ರೆಡಿಯಾಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ಅನುಷ್ಕಾ ನಾಯಕಿ. ಇದೊಂದು ಪಕ್ಕಾ ಲವ್ ಸ್ಟೋರಿಯಂತೆ. ರಾಧಾ ಕೃಷ್ಣ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಸಾಹೋ ಜೊತೆಜೊತೆಯಲ್ಲೇ ಈ ಚಿತ್ರದ ಶೂಟಿಂಗ್ ಕೂಡ ನಡೆಯಲಿದೆ.

ಇದೊಂದು ರೊಮ್ಯಾಂಟಿಕ್ ಚಿತ್ರವಾಗಿರೋದ್ರಿಂದ ಪ್ರಭಾಸ್ ಗೆ ಅನುಷ್ಕಾ ಶೆಟ್ಟಿ ಜೋಡಿಯಾದ್ರೆ ಚೆನ್ನ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ನಿರ್ದೇಶಕರು. ಹಾಗಾಗಿ ಹೊಸ ಮುಖಕ್ಕಾಗಿ ಹುಡುಕಾಟ ನಡೆಸೋ ಪ್ರಯತ್ನವನ್ನೇ ಕೈಬಿಟ್ಟಿದ್ದಾರೆ ಎನ್ನಲಾಗ್ತಿದೆ. ಸದ್ಯ ಅನುಷ್ಕಾ ಭಾಗಮತಿ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ರೆ, ಪ್ರಭಾಸ್ ಸಾಹೋ ಶೂಟಿಂಗ್ ನಲ್ಲಿ ತೊಡಗಿದ್ದಾರೆ.

ಕೃಪೆ : ಕನ್ನಡ ದುನಿಯಾ

Leave a Reply