ಪ್ರೇಮಿಗಳ ದಿನಾಚರಣೆಗೆ ಉಡುಗೊರೆಯಾಗಿ ‘ಓ ಪ್ರೇಮವೇ’ ಸಿನಿಮಾ ದ ಟ್ರೇಲರ್

ಪ್ರೇಮಿಗಳ ದಿನಾಚರಣೆಗೆ ನಟ ದರ್ಶನ್ ಹಾಗೂ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಪ್ರೇಮಸಂದೇಶವನ್ನು ಕೊಟ್ಟಿದ್ದಾರೆ.

ಯೆಸ್, ಪ್ರೇಮಿಗಳ ದಿನಾಚರೆಣೆಗೆ ಹುಚ್ಚ ವೆಂಕಟ್ ಹಾಗೂ ದರ್ಶನ್ ಚಿಕ್ಕದೊಂದು ಉಡುಗೊರೆ ನೀಡಿದ್ದಾರೆ. ನಟ ದರ್ಶನ್ ಪ್ರೇಮಿಗಳಿಗಾಗಿ ‘ಓ ಪ್ರೇಮವೇ’ ಸಿನಿಮಾ ದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಉತ್ತಮ ಸಂದೇಶವಿರುವ ಈ ಸಿನಿಮಾಗೆ ಪ್ರೋತ್ಸಾಹ ನೀಡಿ ಎಂದು ಹೇಳಿದ್ದಾರೆ.

ಅಂದಹಾಗೆ ‘ಓ ಪ್ರೇಮವೇ’ ಸಿನಿಮಾದಲ್ಲಿ ಹುಚ್ಚ ವೆಂಕಟ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಕ್ಕಿ ಗರ್ಲಾನಿ ಹಾಗೂ ಅಪೂರ್ವ ತೆರೆ ಹಂಚಿಕೊಂಡಿದ್ದಾರೆ. ನವ ನಿರ್ದೇಶಕ ಮನೋಜ್ ಈ ಸಿನಿಮಾಗೆ ಆಯಕ್ಷನ್ ಕಟ್ ಹೇಳುತ್ತಿದ್ದಾರೆ.

ಕೃಪೆ : ಕನ್ನಡ ನ್ಯೂಸ್ ನೌ

Leave a Reply