ಡೈರೆಕ್ಟರ್ ದಯಾಳ್ ರಿಂದ ಬಿಗ್ ಬಾಸ್ ಮಂದಿಗೆ ಸಿನಿಮಾ ಚಾನ್ಸ್

ಜೆಕೆ ಹಾಗೂ ಅನುಪಮಾ ಅವರಿಗಾಗಿ ಸಿನಿಮಾ ನಿರ್ದೇಶನ ಮಾಡುವುದಾಗಿ ತಿಳಿಸಿದ್ದ ಡೈರೆಕ್ಟರ್ ದಯಾಳ್ ಈಗ ಬಿಗ್ ಬಾಸ್ ಕೆಲವು ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಫೆ.19 ರಂದು ಈ ಸಿನಿಮಾಗಳು ಸೆಟ್ಟೇರಲಿದ್ದು, ಚಿತ್ರದಲ್ಲಿ ಅನುಪಮ, ಜೆಕೆ, ಬಿಗ್ ಬಾಸ್ ವೈಷ್ಣವಿ ಅಭಿನಯಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಒಂದು ಸಿನಿಮಾ ಮಾಡ್ತೀನಿ ಎಂದು ಹೇಳಿದ್ದ ದಯಾಳ್ ಈಗ ಎರಡು ಸಿನಿಮಾಗೆ ಮಹೂರ್ತ ಮಾಡಲು ನಿರ್ಧರಿಸಿದ್ದಾರೆ. ಈ ಎರಡು ಸಿನಿಮಾಗೆ ‘ಆ ಕರಾಳ ರಾತ್ರಿ’ ಹಾಗೂ ‘ಪುಟ 109’ ಎಂಬ ಟೈಟಲ್ ಇಡಲಾಗಿದೆ. ಇನ್ನೂ ಈ ಎರಡು ಸಿನಿಮಾಗಳಲ್ಲಿ ಬಿಗ್ ಬಾಸ್ ಯಾವ ಸ್ಪರ್ಧಾಳುಗಳು ನಟಿಸಲಿದ್ದಾರೆ ಎಂಬ ಪ್ರಶ್ನೆಗೆ ಚಿತ್ರದ ಮಹೂರ್ತದ ದಿನವೇ ಉತ್ತರ ಸಿಗಲಿದೆ.

Leave a Reply