ಮತೊಮ್ಮೆ ಖಳನಾಯಕನಾಗಿ ಧನಂಜಯ್

ಕಳೆದವಾರವಷ್ಟೇ ಹೊಸ ನಾಯಕಿಯನ್ನ ಕರೆತಂದಿದ್ದ ನಿರ್ಮಾಪಕರು ಈಗ ದರ್ಶನ್ ಚಿತ್ರಕ್ಕೆ ಕನ್ನಡ ಸಿನಿಮಾರಂಗದ ಭರವಸೆ ನಾಯಕ ನಟನಾಗಿರುವ ಧನಂಜಯ ಅವರನ್ನ ಕರೆದಂತಿದ್ದಾರೆ.

ಸ್ಪೆಷಲ್ ಸ್ಟಾರ್ ಆಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಧನಂಜಯ ಟಗರು ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸಿನಲ್ಲಿ ಆಶ್ಚರ್ಯ ಮೂಡುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ಧನಂಜಯ ಅವರನ್ನ ವಿಭಿನ್ನ ಪಾತ್ರದಲ್ಲಿ ನೋಡುವ ಅವಕಾಶ ಸಿಕ್ಕಿದೆ.

ಚಾಲೆಂಜಿಂಗ್ ಸ್ಟಾರ್ ಅಭಿನಯದ ಪಿ ಕುಮಾರ್ ನಿರ್ದೇಶನದ ಶೈಲಜಾ ನಾಗ್ ನಿರ್ಮಾಣದ ಸಿನಿಮಾದಲ್ಲಿ ಧನಂಜಯ ಅಭಿನಯಿಸುತ್ತಿದ್ದಾರೆ. ಇನ್ನು ಹೆಸರಿಡದ ಚಿತ್ರದಲ್ಲಿ ಧನಂಜಯ ವಿಲನ್ ಆಗಿ ಮಿಂಚಲಿದ್ದಾರಂತೆ.

ಟಗರು ಸಿನಿಮಾದ ಟೀಸರ್ ನಲ್ಲಿ ಡಾಲಿ ಪಾತ್ರದ ಚಿಕ್ಕ ಸೀನ್ ಗಳನ್ನ ತೋರಿಸಲಾಗಿದೆ. ಅದರ ಜೊತೆಯಲ್ಲಿ ಧನಂಜಯ ಇರುವ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇವೆಲ್ಲವನ್ನೂ ನೋಡಿರುವ ಪ್ರೇಕ್ಷಕ ತೆರೆ ಮೇಲೆ ಡಾಲಿ ಅಭಿನಯವನ್ನ ನೋಡಲು ಕಾತುರರಾಗಿದ್ದಾರೆ.

ಕೃಪೆ : ಫಿಲ್ಮಿಬೀಟ್

Leave a Reply