ಶ್ರೀಮಂತ ಸಿಎಂ ಗಳಲ್ಲಿ ಸಿದ್ದರಾಮಯ್ಯರವರಿಗೆ ಎಷ್ಟನೇ ಸ್ಥಾನ ?

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಸಂಸ್ಥೆ ದೇಶದ ಮುಖ್ಯಮಂತ್ರಿಗಳ ಬಗ್ಗೆ ಸಮೀಕ್ಷೆ ನಡೆಸಿದೆ. ದೇಶದ ಮುಖ್ಯಮಂತ್ರಿಗಳು ಎಷ್ಟು ಶ್ರೀಮಂತರು?, ಅವರು ಓದಿರುವುದೇನು?, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳೇನು? ಹಿರಿ-ಕಿರಿ ವಯಸ್ಸಿನ ಮುಖ್ಯಮಂತ್ರಿಗಳು ಯಾರು? ಎಂದು ಎಡಿಆರ್ ಸಮೀಕ್ಷೆ ನಡೆಸಿದೆ.

ಎಡಿಆರ್ ಸಂಸ್ಥೆ ಸಿದ್ಧಪಡಿಸಿದ ವರದಿ ಬಹಿರಂಗವಾಗಿದೆ. ದೇಶದ 31 ಮುಖ್ಯಮಂತ್ರಿಗಳಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 177 ಕೋಟಿ ಆಸ್ತಿ ಹೊಂದಿದ್ದು ಶ್ರೀಮಂತ ಸಿಎಂಗಳಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ 26 ಲಕ್ಷ ಆಸ್ತಿ ಹೊಂದಿದ್ದು ಕೊನೆಯ ಸ್ಥಾನ ಪಡೆದಿದ್ದಾರೆ.

siddu_new

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಒಟ್ಟು ಆಸ್ತಿ ಮೌಲ್ಯ 13.61 ಕೋಟಿ ರೂ.ಗಳಾಗಿವೆ. ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಸಾಲಿನಲ್ಲಿಸಿದ್ದರಾಮಯ್ಯ ಅವರು 6ನೇ ಸ್ಥಾನದಲ್ಲಿದ್ದಾರೆ.2013ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಸಿದ್ದರಾಮಯ್ಯ ಘೋಷಿಸಿದ್ದ ಆಸ್ತಿ 5.15 ಕೋಟಿ ರೂ.ಗಳು.

ಮೊದಲನೇ ೩ ಸ್ಥಾನ :
೧) ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು — ಒಟ್ಟು ಆಸ್ತಿ 177 ಕೋಟಿ ರೂ.ಗಳು.
೨) ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು — ಒಟ್ಟು ಆಸ್ತಿ 129 ಕೋಟಿ ರೂ.ಗಳು.
೩) ಪಂಜಾಬ್ ಸಿಎಂ ಅಮರಿಂದರ್ ಸಿಂಗ್ — lಒಟ್ಟು ಆಸ್ತಿ ೪೮ ಕೋಟಿ ರೂ.ಗಳು.

top3

ಬಡ ಸಿಎಂ ಗಳು:
೧) ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ — ಒಟ್ಟು ಆಸ್ತಿ 26 ಲಕ್ಷ ರೂ..
೨) ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ — ಒಟ್ಟು ಆಸ್ತಿ 30 ಲಕ್ಷ ರೂ.
೩) ಜಮ್ಮು ಮತ್ತು ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ — ಒಟ್ಟು ಆಸ್ತಿ 55 ಲಕ್ಷ ರೂ.

low3.jpg

ಅಪರಾಧ ಪ್ರಕರಣಗಳು :

law

31 ಮುಖ್ಯಮಂತ್ರಿಗಳ ಪೈಕಿ ಶೇ 65ರಷ್ಟು ಸಿಎಂಗಳ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಶೇ 35ರಷ್ಟು ಸಿಎಂಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಶೇ 26ರಷ್ಟು ಸಿಎಂಗಳ ವಿರುದ್ಧ ಗಂಭೀರ ಪ್ರಕರಣಗಳಿವೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಮುಖ್ಯಮಂತ್ರಿಗಳ ಶಿಕ್ಷಣ:

education.jpg

31 ಮುಖ್ಯಮಂತ್ರಿಗಳ ಪೈಕಿ 12ನೇ ತರಗತಿ ಪಾಸಾದವರು 3 ಜನರು. ಪದವೀಧರರು 12, ವೃತ್ತಿಪರ ಪದವಿ 10, ಸ್ನಾತಕೋತ್ತರ ಪದವಿ 5, ಡಾಕ್ಟರೇಟ್ 1.

 

 

 

 

 

 

 

 

Leave a Reply