ಸ್ಯಾಂಡಲ್ ವುಡ್ ನಲ್ಲಿ ಶ್ರುತಿ ಪ್ರಕಾಶ್ ಹವಾ

ಬಿಗ್‌ ಬಾಸ್‌ ಸೀಸನ್‌-5 ಸ್ಪರ್ಧಿಗಳು ನಿಧಾನವಾಗಿ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರುತ್ತಿದ್ದಾರೆ. ರನ್ನರ್‌ ಅಪ್‌ ದಿವಾಕರ್‌ಗೆ ಮೂರ್ನಾಲ್ಕು ಸಿನಿಮಾಗಳಿಂದ ಆಫರ್‌ ಬಂದಿದೆ. ಈಗ ಶ್ರುತಿ ಪ್ರಕಾಶ್‌ ಸರದಿ. ಎಸ್‌ ನಾರಾಯಣ್‌ ನಿರ್ದೇಶನದ 51 ನೇ ಸಿನಿಮಾಗೆ ಶ್ರುತಿ ಪ್ರಕಾಶ್‌ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಸಾಕಷ್ಟು ಮಂದಿ ನಿರ್ದೇಶಕರು ಶ್ರುತಿಗೆ ಆಫರ್‌ ನೀಡಿದ್ರು, ಶ್ರುತಿ ಯಾವುದನ್ನು ಒಪ್ಪಿಕೊಂಡಿಲ್ಲ. ಆದರೆ ಎಸ್‌ ನಾರಾಯಣ್‌ ಅವರ ಚಿತ್ರವನ್ನು ಒಪ್ಪಿಕೊಳ್ಳುತ್ತಾರೆ ಎಂಬ ಸುದ್ದಿ ಹಬ್ಬಿದೆ. ವಿಶೇಷ ಎಂದರೆ ಈ ಚಿತ್ರಕ್ಕೆ ನಾರಾಯಣ್‌ ಪುತ್ರ ಪಂಕಜ್‌ ನಾಯಕರಾಗಿದ್ದಾರೆ.

ಬೆಳಗಾವಿ ಮೂಲದ ಶ್ರುತಿ ಪ್ರಕಾಶ್‌ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಗಾಯಕಿಯಾಗಿರುವ ಶ್ರುತಿ, ಅಭಿನಯದಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲ್ಲದೇ ಶೃತಿ ಡಾನ್ಸ್‌ ಸಹ ಚೆನ್ನಾಗಿ ಮಾಡುತ್ತಾರೆ. ನಾರಾಯಣ್‌ ಈಗಾಗಲೇ ಒಂದು ರೌಂಡ್‌ ಮಾತುಕತೆ ನಡೆದಿದ್ದು, ಅಂತಿ ನಿರ್ಧಾರ ಹೊರ ಬೀಳಬೇಕಿದೆ. ಈ ಚಿತ್ರಕ್ಕೆ ಬಿಗ್‌ಬಾಸ್‌ ವಿನ್ನರ್‌ ಚಂದನ್‌ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ.

ಕೃಪೆ : ವಿಜಯ ಕರ್ನಾಟಕ

Leave a Reply