‘ಧ್ವಜ’ ಸಿನಿಮಾದಲ್ಲಿ ನಾಯಕಿ ಯಾಗಿ ಪ್ರಿಯ ಮಣಿ

ಅಶೋಕ್ ಕಶ್ಯಪ್‌ ಅವರು ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡು ಮುಗಿಸಿದ್ದಾರೆ. ಅದೇ ‘ಧ್ವಜ’ ಸಿನಿಮಾ. ಈ ಚಿತ್ರಕ್ಕೀಗ ಹಿನ್ನೆಲೆ ಸಂಗೀತದ ಕೆಲಸ ನಡೆಯುತ್ತಿದೆ. ಸಿಬಿಜೆ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಸುಧಾ ಬಸವೇಗೌಡ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಪ್ರಿಯಾಮಣಿ ನಾಯಕಿಯಾಗಿ ನಟಿಸಿದ್ದಾರೆ.

ರವಿ ನಾಯಕರಾಗಿದ್ದು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅಶೋಕ್‌ ಕಶ್ಯಪ್‌ ನಿರ್ದೇಶನದ ಜತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಇದೊಂದು ರಾಜಕೀಯ, ಲವ್‌ಸ್ಟೋರಿ ಮತ್ತು ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡಿದೆ. ಬೆಂಗಳೂರು, ಮೈಸೂರು ಮತ್ತು ಮೇಲುಕೋಟೆಯಲ್ಲಿ ಸುಮಾರು 80 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ.

ಚಿತ್ರದಲ್ಲಿ ಟಿ.ಎನ್‌. ಸೀತಾರಾಂ,ದಿವ್ಯಾ ಉರುದುಗ, ಮಂಡ್ಯ ರವಿ, ವೀಣಾಸುಂದರ್‌, ತಬಲನಾಣಿ, ಬಲ, ಸುಂದರರಾಜ್‌ ಸೇರಿದಂತೆ ಇನ್ನು ಅನೇಕ ಕಲಾವಿದರು ನಟಿಸಿದ್ದಾರೆ. ಚಿತ್ರದ ಐದು ಹಾಡುಗಳಿಗೆ “ಕಬಾಲಿ’ ಚಿತ್ರಕ್ಕೆ ಸಂಗೀತ ನೀಡಿದ್ದ ಸಂತೋಷ್‌ ನಾರಾಯಣನ್‌ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್‌, ಕವಿರಾಜ್‌, ರವಿ, ಚಂದನ್‌ ಹಾಗೂ ಮಂಜು ಮಾಂಡವ್ಯ ಗೀತೆಗಳನ್ನು ರಚಿಸಿದ್ದು, ರವಿಚಂದ್ರನ್‌ ಸಂಕಲನ ಮಾಡಿದ್ದಾರೆ.

Leave a Reply