ನಿಮ್ಮನ್ನು ನೀವು ಕಂಡುಕೊಳ್ಳುವುದೇ ಗೂಗಲ್ ಕಥೆಯ ಜೀವಾಳ – ಡಾ.ನಾಗೇಂದ್ರ ಪ್ರಸಾದ್

ತಮ್ಮ ಮುಂದಿನ ಚಿತ್ರ ಗೂಗಲ್ ನಲ್ಲಿ ಡಾ.ನಾಗೇಂದ್ರ ಪ್ರಸಾದ್ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಗೂಗುಲ್ ಎಂಬ ಶಬ್ದಕ್ಕೆ ಕನ್ನಡದಲ್ಲಿ ಟ್ವಿಸ್ಟ್ ನೀಡಿ ಗೂಗಲ್ ಮಾಡಿದ್ದಾರೆ. ಇದಕ್ಕೆ ಒನ್ ಮ್ಯಾನ್ ಶೋ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ಹೀರೋ ಮತ್ತು ಹೀರೋಯಿನ್ ಸುತ್ತ ಸುತ್ತುವ ಕಥೆ ಗೂಗಲ್ ಆಗಿರದೆ, ಚಿತ್ರದಲ್ಲಿ ಏಳೆಂಟು ಪಾತ್ರಗಳ ಸುತ್ತ ಕಥೆ ಹೆಣೆಯಲಾಗಿದೆ. ಯಾವುದೇ ಇಮೇಜ್ ಇಲ್ಲದ ಪ್ರಮುಖ ಪಾತ್ರ ಚಿತ್ರಕ್ಕೆ ಬೇಕಾಗಿತ್ತು. ಹೀಗಾಗಿ ಈ ಚಿತ್ರ ಮಾಡಿದೆ ಎನ್ನುತ್ತಾರೆ. ತಮ್ಮ ನಿರ್ಮಾಣ ಸಂಸ್ಥೆ ಉತ್ಸವ ಮೂವೀಸ್ ನಡಿ ಸಿನಿಮಾ ನಿರ್ಮಿಸಿರುವ ನಾಗೇಂದ್ರ ಪ್ರಸಾದ್ ಚಿತ್ರದ ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ಛಾಯಾಗ್ರಹಣ ಕೆಲಸಗಳೆಲ್ಲವನ್ನು ತಾವೇ ನಿರ್ವಹಿಸಿದ್ದಾರೆ.

Related image

ನಾಗೇಂದ್ರ ಪ್ರಸಾದ್ ಅವರ ಜೊತೆಗೆ ಚಿತ್ರದಲ್ಲಿ ಶುಭಾ ಪೂಂಜ, ಅಮೃತಾ ರಾವ್, ಹೊಸಬರಾದ ದೀಪಕ್, ಶೋಭರಾಜ್, ಮುನಿ, ಸಂಪತ್ ಜೈದೇವ್ ಮತ್ತು ಬೇಬಿ ವೈಷ್ಣವಿ ನಟಿಸಿದ್ದಾರೆ.

ನಿಮ್ಮನ್ನು ನೀವು ಕಂಡುಕೊಳ್ಳುವುದೇ ಗೂಗಲ್ ಕಥೆಯ ಜೀವಾಳ. ಗೂಗಲ್ ಎಂಬ ಖ್ಯಾತ ಸರ್ಚ್ ಎಂಜಿನ್ ಇಡೀ ವಿಶ್ವವನ್ನು ನಿಮ್ಮ ಕೈಯಲ್ಲಿಯೇ ಪಡೆಯಬಹುದು. ರೈತರಿಂದ ಹಿಡಿದು ಕಾರ್ಪೊರೇಟ್ ಜಗತ್ತಿನವರೆಗೆ ಎಲ್ಲರೂ ಮಾಹಿತಿಗಾಗಿ ಗೂಗಲ್ ನ್ನು ಅವಲಂಬಿಸಿಕೊಂಡಿರುತ್ತಾರೆ. ಆದರೆ ಮನುಷ್ಯನ ಮನಸ್ಸಿನಲ್ಲಿ ಏನು ನಡೆಯುತ್ತಿದೆ, ಅವನ ಹೃದಯ ಏನು ಹೇಳುತ್ತಿದೆ ಎಂದು ತಿಳಿದುಕೊಳ್ಳುವುದು ಕಷ್ಟ. ಈ ಚಿತ್ರ ಮನುಷ್ಯನ ಮನಸ್ಸು, ಭಾವನೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತದೆ. ಯಾರೋ ನಿಮ್ಮ ಮನಸ್ಸನ್ನು ಗೂಗಲ್ ಮಾಡಲು ಯತ್ನಿಸಿದರೆ ಏನಾಗುತ್ತದೆ ಎಂಬುದು ಚಿತ್ರದ ಕಥೆಯಾಗಿದೆ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.

ಕೃಪೆ : ಕನ್ನಡ ಪ್ರಭ

Leave a Reply