ಸ್ಯಾಂಡಲ್ ವುಡ್ ಗೆ ಮರಳಿ ಬರುತ್ತಿರುವ 80ರ ಹೊಸ್ತಿಲಿನಲ್ಲಿರುವ ಸರೋಜಾದೇವಿ

ಅಂಜನಿಪುತ್ರ ಸಿನಿಮಾ ಬಿಡುಗಡೆಯಾದ ನಂತರ ಪುನೀತ್ ಯಾವುದೇ ಚಿತ್ರದ ನಟನೆಗೆ ಸಿನಿಮಾ ಸೆಟ್ ಗೆ ಬಂದಿರಲಿಲ್ಲ. ಫ್ಯಾಮಿಲಿ ಪವರ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದರು. ಮಾರ್ಚ್ 1ಕ್ಕೆ ಫ್ಯಾಮಿಲಿ ಪವರ್ ಶೂಟಿಂಗಾ ಮುಗಿಯುತ್ತದೆ. ಮತ್ತೆ ಈಗೊಂದು ಹೊಸ ಚಿತ್ರದ ಶೂಟಿಂಗ್ ಗೆ ರೆಡಿ ಆಗಿದ್ದಾರೆ ಪವರ್ ಸ್ಟಾರ್.

ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಾರೆ ಮತ್ತು ನಿರ್ಮಾಣ ರಾಕ್ ಲೈನ್ ವೆಂಕಟೇಶ್ ಅವರದ್ದು ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರದಲ್ಲಿ ಇಬ್ಬರು ಹೀರೋಯಿನ್ ಗಳಿರುತ್ತಾರೆ. ಚಿತ್ರತಂಡ ಇದೀಗ ನಾಯಕಿಯರ ಹುಡುಕಾಟದಲ್ಲಿ ತೊಡಗಿದೆ. ರಣ ವಿಕ್ರಮ ನಂತರ ಪವನ್ ಮತ್ತು ಪುನೀತ್ ಮತ್ತೆ ಒಂದಾಗುತ್ತಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ ಈ ಚಿತ್ರದ ಮೂಲಕ ಮತ್ತೆ ಮರಳುತ್ತಿರುವುದು ಎಲ್ಲರಿಗೂ ಸಂತಸ ಮೂಡಿಸಿದೆ. ಕೆಲವು ಸುತ್ತಿನ ಮಾತುಕತೆ ನಂತರ ಸರೋಜಾದೇವಿ ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ.

80ರ ಹೊಸ್ತಿಲಿನಲ್ಲಿರುವ ಸರೋಜಾದೇವಿಯವರು ಸುಮಾರು 6 ದಶಕಗಳ ಕಾಲ ಸ್ಯಾಂಡಲ್ ವುಡ್ ಚಿತ್ರೋದ್ಯಮವನ್ನು ಆಳಿದವರು. ಅವರ ನಟನೆ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದರು. ಗೌರವ ಡಾಕ್ಟರೇಟ್ ಮತ್ತು ಪದ್ಮ ಭೂಷಣ ಪಡೆದ ಸರೋಜಾದೇವಿಯವರು ರಾಜ್ ಕುಮಾರ್ ಅವರ ಮಗ ಪುನೀತ್ ಜೊತೆ ನಟಿಸಲು ಮುಂದಾಗಿದ್ದಾರೆ.

Leave a Reply