ಬಿಜೆಪಿಯ ಪರಿವರ್ತನಾ ಯಾತ್ರೆ ಫೇಲ್ ಆಗಲು ವೈಷ್ಣೋದೇವಿ ಶಾಪವೇ ಕಾರಣವಾಯಿತಾ?

Shaapa

ಬಿಜೆಪಿ ಪಕ್ಷದ ಪರಿವರ್ತನಾ ಯಾತ್ರೆ ವಿಫಲಗಿವಾರುವುದರಿಂದ ಅದಕ್ಕೆ ಕಾರಣಗಳನ್ನು ಹುಡುಕುವ ಕಾರ್ಯ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿದೆ. ಎಲ್ಲವೂ ಸರಿಯಾಗಿ ನಡೆಸುತ್ತಿದ್ದೇವೆ ಎಂದು ನಾಯಕರು ಅಂದುಕೊಳ್ಳುವಷ್ಟರಲ್ಲೇ ಹೋದ ಕ್ಷೇತ್ರದಲ್ಲೆಲ್ಲಾ ಅಂತಹದ್ದೇನು ಜನ ಬೆಂಬಲ ಸಿಗದೇ ಇರುವುದು ಮತ್ತು ಪದೇ ಪದೇ ಅವಘಡಗಳು ಸಂಭವಿಸುತ್ತಿರುವುದು, ಹೋದ ಕಡೆಯೆಲ್ಲಾ ಖಾಲಿ ಖುರ್ಚಿಗಳೇ ರಾರಾಜಿಸುತ್ತಿರುವುದು ಈಗ ಮೋದಿಯ ಆಸೆಗೂ ತಣ್ಣೀರು ಎರಚಿದಂತಾಗಿದೆ. ಹೀಗಿರುವಾಗಲೇ, ಈ ನಿರಾಶಾದಾಯಕ ಬೆಳವಣಿಗೆಗಳಿಗೆ ವೈಷ್ಣೋದೇವಿಯ ಶಾಪವೇ ಕಾರಣ ಎಂದು ಹೇಳಲಾಗುತ್ತಿದೆ.

ನಡೆದದ್ದು ಏನು?

0000000

ಈ ಹಿಂದೆ 2012ರಲ್ಲಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಕೆಜೆಪಿ ಪಕ್ಷದ ಮುಖಂಡರು ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದರು. ಈ ಸಮಯದಲ್ಲಿ ಕೆಜೆಪಿ ಪಕ್ಷದ ಶೋಭಾ, ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಬೇಡಿಕೊಂಡು, ಆ ಆಸೆ ನೆರವೇರಿದರೆ, ಒಂದು ಗಂಡು ಆನೆ ಮರಿಯನ್ನು ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ಇದರಂತೆ 2012ರಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ವಂಚಿತವಾಯಿತು. ಆದರೆ, ಶೋಭಾ ಅವರು ಇನ್ನೂ ಕೂಡ ಈ ಹರಕೆ ತೀರಿಸಿಲ್ಲ. ಇತ್ತೀಚಿಗೆ ಸಿ.ಟಿ. ರವಿ ಅವರನ್ನು ಚಿಕ್ಕಮಗಳೂರಿನಲ್ಲಿ ಭೇಟಿ ಮಾಡಿದ ನಾಗಾಸಾಧುಗಳೂ ಕೂಡ ಈ ಹರಕೆಯನ್ನು ತೀರಿಸದಿದ್ದರೆ, ದೊಡ್ಡ ಗಂಡಾಂತರ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದ್ದಾರೆ. ಈ ಸನ್ನಿವೇಶ ಸಿ.ಟಿ. ರವಿ ಅವರಿಗೆ ಬಹಳ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ತಮ್ಮ ಆಪ್ತರ ಜೊತೆಯೂ ಸಿ.ಟಿ. ರವಿ ಅವರು ಶೋಭಾ ಕರಂದ್ಲಾಜೆಯ ಹರಕೆಯ ಕುರಿತು ಹಂಚಿಕೊಂಡಿದ್ದಾರೆ.

2008ರಲ್ಲಿ ಕೇರಳದ ಕಣ್ಣೂರಿನ ದೇವಸ್ಥಾನಕ್ಕೆ ಒಂದು ಆನೆ ಮರಿಯನ್ನು ಶೋಭಾ ಕರಂದ್ಲಾಜೆ ದಾನವಾಗಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Leave a Reply