ಸ್ವಿಮ್‌ ಸೂಟ್‌ನಲ್ಲಿ ಈಗ ಮಾನಷಿ ಚಿಲ್ಲರ್‌

2017ರ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಭಾರತದ ಚೆಲುವೆ ಮಾನಷಿ ಚಿಲ್ಲರ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸ್ವಿಮ್‌ ಸೂಟ್‌ನಲ್ಲಿರುವ ತಮ್ಮ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದು, ಆ ಫೋಟೋಗಳು ವೈರಲ್‌ ಆಗಿವೆ. ಪಡ್ಡೆಗಳ ನಿದ್ದೆಗೆಡಿಸಿವೆ.

ತಮ್ಮ ಬೋಲ್ಡ್‌ ನಿರ್ಧಾರಗಳ ಮೂಲಕ ಸಖತ್‌ ಫೇಮಸ್‌ ಆಗುತ್ತಿರುವ ಮಾನಷಿ, ಆಗಾಗ್ಗೆ ಅಚ್ಚರಿ ಮೂಡಿಸುವಂತಹ ಫೋಟೋಗಳನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಾರೆ. ಆ ಮೂಲಕ ಒಂದಷ್ಟು ಚರ್ಚೆಯನ್ನೂ ಹುಟ್ಟುಹಾಕುತ್ತಾರೆ. ಸದ್ಯ ಅಪ್‌ಲೋಡ್‌ ಮಾಡಿರುವ ಸ್ವಿಮಿಂಗ್‌ ಫೂಲ್‌ ಹತ್ತಿರದ ಇವರ ಹಾಟ್‌ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿವೆ.

ಕೃಪೆ : ವಿಜಯ ಕರ್ನಾಟಕ

Leave a Reply