ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗದೇ ಇರೋದಕ್ಕೆ ದೇವೇಗೌಡರಿಗೆ ಏಕೆ ಕ್ರೆಡಿಟ್ ಕೊಡಬೇಕು..!!!

ಕಾವೇರಿ ಕನ್ನಡಿಗರ ಜೀವನಾಡಿ,ಇಂತಹ ಕಾವೇರಿ ನೀರು ಕನ್ನಡಿಗರ ಸ್ವತ್ತು ಎಂದು ಹೇಳಿಕೊಂಡರೆ ಯಾವುದೇ ಅತಿಶಯೋಕ್ತಿಯಿಲ್ಲ.
ಇಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗದೇ ಇರೋದಕ್ಕೂ ದೇವೇಗೌಡರಿಗೂ ಏನು ಸಂಬಂಧ ಅಂಥ ನೀವು ಕೇಳ್ಬಹುದು..!! ಇವರ ವಿವರ ಮುಂದೆ ಓದಿ
2017 ರಲ್ಲಿ ತಮಿಳುನಾಡು ಮತ್ತು ಕೇರಳ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ಯನ್ನು ರಚಿಸುವಂತೆ ಸುಪ್ರೀಂಕೋರ್ಟ್ ನಾ ಕಾವೇರಿ ನ್ಯಾಯಾಧಿಕರಣಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದವು, ಇದನ್ನು ಕೇಂದ್ರ ಸರ್ಕಾರ ಪರಿಗಣಿಸಿತ್ತು ಎನ್ನುವುದು ವಿಪರ್ಯಾಸ ಮತ್ತು ಕೇಂದ್ರ ಸರ್ಕಾರ ಕನ್ನಡಿಗರಿಗೆ ಮಾಡಿದ ಮೋಸವೆಂತಲೇ ಹೇಳಬಹುದು,ಇಂತಹ ಸಂದರ್ಭದಲ್ಲಿ ಕರ್ನಾಟಕ ತೀವ್ರ ಪ್ರತಿರೋಧ ವನ್ನು ಒಡ್ಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಆಗಲೇ ನೋಡಿ ನಮ್ಮ ಮಣ್ಣಿನ ಮಗ ದೇವೇಗೌಡರು ಅಖಾಡಕ್ಕೆ ಇಳಿದಿದ್ದು, ತಮಿಳುನಾಡು ಮತ್ತು ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದ ದೇವೇಗೌಡರು ಕರ್ನಾಟಕದ ಪಾಲಿಗೆ ಇದು ಮರಣ ಶಾಸನ ಅಂತ ಬಣ್ಣಿಸಿದರು. ಆದ್ರೆ ದೇವೇಗೌಡರು ಸುಮ್ಮನೇ ಕೂರಲಿಲ್ಲ ನಮಗೆಲ್ಲಾ ತಿಳಿದಿರುವಂತೆ ಕೇರಳದಲ್ಲಿ ಜನತಾದಳ ಸರ್ಕಾರದ ಒಬ್ಬ ಶಾಸಕರಾಗಿದ್ದಾರೆ ಅವರ ಮೂಲಕ ಕೇರಳ ಸರ್ಕಾರವನ್ನು
ಸಂಪರ್ಕಿಸಿ ಕೇರಳ ಸರ್ಕಾರ ಸಲ್ಲಿಸಿದ್ದ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ತೆಗೆಸುವಲ್ಲಿ ಯಶಸ್ವಿಯಾದರು. ಇದು ದೇವೇಗೌಡರ ಕಾರ್ಯಕ್ಷಮತೆ ಮತ್ತು ನೆಲ ಜಲದ ಮೇಲಿರುವ ಬದ್ಧತೆಯನ್ನು ತೋರುತ್ತದೆ.

ಆದರೆ ಇಷ್ಟಕ್ಕೇ ಮುಗಿಯಲಿಲ್ಲ ಕಾವೇರಿಯ ಕಥೆ, ಕೇರಳ ಸರ್ಕಾರದ ಅರ್ಜಿಯನ್ನು ಹಿಂಪಡೆಯುವಲ್ಲಿ ದೇವೇಗೌಡರ ಪ್ರಯತ್ನ ಯಶಸ್ವಿಯಾದರೂ, ತಮಿಳುನಾಡಿನ ವಿಚಾರದಲ್ಲಿ ದೇವೇಗೌಡರು ಏನೂ ಮಾಡದ ಪರಿಸ್ಥಿಯಲ್ಲಿ ಇದ್ದರು, ಕಾರಣ ತಮಿಳುನಾಡಿನಲ್ಲಿ ಬಲವಾದ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿತ್ತು. ಆನಂತರ ಕೇಂದ್ರ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿದು ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಗೆ ಅವಕಾಶ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿತು. ಆಗಲೇ ನೋಡಿ ನಮ್ಮ ದೇವೇಗೌಡರು ತನ್ನ ರಾಜಕೀಯ ಅನುಭವವನ್ನು ಧಾರೆ ಎರೆದಿದ್ದು.

ದೇವೇಗೌಡರು ಅವರ ವಯಸ್ಸನ್ನೂ ಲೆಕ್ಕಿಸದೇ ಬೆಂಗಳೂರಿನ ಗಾಂಧಿ ಪ್ರತಿಮೆಯ ಮುಂದೆ ಉಪವಾಸ ಸತ್ಯಾಗ್ರಹ ಕೂತರು ಅವರ ಸ್ನೇಹಿತರು ಕರ್ನಾಟಕದ ರಾಜಕಾರಣಿಗಳು ಎಷ್ಟೋ ಬಲವಂತ ಮಾಡಿದ್ರೂ ಅವರ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲಿಲ್ಲ ಆಗಲೇ ನೋಡಿ ಪವಾಡ ನಡೆದಿದ್ದು, ದೇವೇಗೌಡರು ಉಪವಾಸ ಸತ್ಯಾಗ್ರಹ ಮಾಡ್ತಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಭಾರತದ ಪ್ರಧಾನಮಂತ್ರಿ ಯಾದ ಶ್ರೀ ನರೇಂದ್ರ ಮೋದಿಯವರೇ ಸ್ವತಃ ದೇವೇಗೌಡರಿಗೆ ಕರೆ ಮಾಡಿ ಸತ್ಯಾಗ್ರಹ ವನ್ನು ವಾಪಸ್ ಪಡೆಯಲು ಕೇಳಿಕೊಂಡರು ಆದ್ರೆ ಸ್ವಾಭಿಮಾನಿ ಕನ್ನಡಿಗ ಕಂಡ್ರಿ ನಮ್ಮ ದೇವೇಗೌಡರು, ಅಷ್ಟು ಸುಲಭವಾಗಿ ಒಪ್ಪಿಕೊಂಡು ಬಿಡ್ತಾರಾ..!!ಆಗ ದೇವೇಗೌಡರು ನೀವು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಕಾವೇರಿ ನಿರ್ವಹಣಾ ಮಂಡಳಿ ಅರ್ಜಿಯನ್ನು ಹಿಂಪಡಿಯುವವರೆಗೂ ನಾನು ಉಪವಾಸ ಸತ್ಯಾಗ್ರಹ ನಿಲ್ಲುಸುವ ಮಾತೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು ಮೋದಿಯವರಿಗೆ, ಅಷ್ಟೇ ಅಲ್ಲ ನನಗೆ ಮತ್ತೆ ಕರೆ ಮಾಡಬೇಡಿ ಇನ್ನೂ ಮೂರು ದಿನಗಳ ನಂತರ ಹೂವಿನ ಹಾರವನ್ನು ಕೈಯಲ್ಲಿ ಹಿಡಿದುಕೊಂಡು ಬಂದು ನನ್ನ ಶವದ ಮೇಲೆ ಹಾಕಿ ಎಂದಾಗ ಶ್ರೀ ನರೇಂದ್ರ ಮೋದಿಯವರೇ ದಂಗಾಗಿ ಹೋಗಿದ್ರು..

ಆಗ ನಡೆದಿದ್ದೇ ನೋಡಿ ಪವಾಡಆ‌ ನಂತರ ನಡೆದ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆಗೆ ಸಲ್ಲಿಸಿದ್ದ ಅರ್ಜಿಯನ್ನು ನಮಗೆ ಇನ್ನೂ ಕಾಲಾವಕಾಶ ಬೇಕು ಎಂಬ ಕಾರಣ ನೀಡಿ ಹಿಂಪಡೆಯಿತು.

ಇದು ದೇವೇಗೌಡರ ಬದ್ಧತೆಗೆ ಹಿಡಿದ ಕೈಗನ್ನಡಿ….!!!

✍ಅರುಣ್ ಕುಮಾರ್ ಮರಿಕೆಂಪಯ್ಯ

Leave a Reply