ಜೆಡಿಎಸ್ – ಬಿಎಸ್ಪಿ ಮೈತ್ರಿಗೆ ಬೆಚ್ಚಿಬಿತ್ತಾ ಕಾಂಗ್ರೆಸ್,ಬಿಜೆಪಿ ?

ಕರ್ನಾಟಕದ ಅನುಭವಿ ರಾಜಕಾರಣಿ ಹಾಗೂ ರಾಜಕೀಯ ಚಾಣಕ್ಯರಾಗಿರುವ ದೇವೇಗೌಡರು, ವಯಸ್ಸು 85 ಆದರೂ ರಾಜಕೀಯದಲ್ಲಿ ಇನ್ನೂ ಸಕ್ರಿಯರಾಗಿದ್ದು, ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ತಂತ್ರ ಹೆಣೆಯುತ್ತಲೇ ಇದ್ದಾರೆ.

ಈಗ ಅಂಥದ್ದೇ ಒಂದು ಚಾಣಾಕ್ಷ ನಡೆಯಿಂದ ಕರ್ನಾಟಕ ರಾಜಕೀಯದಲ್ಲೇ ತಲ್ಲಣ ಸೃಷ್ಟಿಸಿದ್ದಾರೆ,ವಿರೋಧಿಗಳ ನಿದ್ದೆಗೆಡಿಸಿದ್ದಾರೆ.

ದೇವೇಗೌಡರ ಚಾಣಾಕ್ಷ ನಡೆ

ಅದು ಹೇಗೆ ಅಂದಿರ,ಯಾರು ಊಹಿಸಲಾಗದ ಮೈತ್ರಿಯಾದ, ಜೆಡಿಎಸ್ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡು, ವಿರೋಧಿಗಳ ನಿದ್ದೆಗೆಡಿಸಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರ ಹೆಸರೇಳಿಕೊಂಡು, 60 ವರ್ಷದಿಂದ ಅಧಿಕಾರ ಅನುಭವಿಸುತ್ತ ಬಂದಿರುವ ಕಾಂಗ್ರೆಸ್’ಗೆ ಶಾಕ್ ಆಗಿದೆ.ಕಾಂಗ್ರೆಸ್’ನ ಲೋಪಗಳನ್ನು, ಅವಾಂತರಗಳನ್ನು ಎತ್ತಿಹಿಡಿದು ಟೀಕೆಗಳನ್ನು ಮಾಡುತ್ತಲೇ ಅಧಿಕಾರಕ್ಕೆ ಬಂದುಬಿಡಬಹುದು ಎಂಬ ಬಿಜೆಪಿಯ ಕನಸು ಛಿದ್ರವಾಗಿದೆ.

ದಲಿತರು,ಮುಸ್ಲಿಮರ ಚಿತ್ತ ಜೆಡಿಎಸ್ ನತ್ತ ???

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಮತ್ತು ದಲಿತರಿಗೆ ಸ್ವಾತಂತ್ರ್ಯ ಬಂದಾಗಿನಿಂದಲು ದ್ರೋಹ ಮಾಡುತ್ತಾ ಬಂದಿದೆ. ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದು ನಂತರ ಬಡವರೆಂದರೆ ಮೂಗಿಗೆ ಕರ್ಚೀಫ್ ಹಿಡಿದುಕೊಂಡು ಮಾರುದೂರ ಓಡುತ್ತಾರೆ.ದಲಿತರ ಕಷ್ಟಗಳನ್ನು ಕೇಳಲು ಯಾರು ಮುಂದೆ ಬರಲಿಲ್ಲ ಎನ್ನುವ ಕೂಗು ಹೆಚ್ಚಾಗಿದೆ.

ಆದ್ದರಿಂದ ಈ ಬಾರಿ ಪರ್ಯಾಯವಾದ ಆಯ್ಕೆ ಸಿಕ್ಕಾರುವುದರಿಂದ ಅಕ್ಕ ಮಾಯಾವತಿ ಮತ್ತು ಕುಮಾರಣ್ಣನತ್ತ ದಲಿತ ಮತಗಳು ಹೆಚ್ಚು ವಾಲುವ ಸಾಧ್ಯತೆಗಳಿವೆ.ಈ ಲೆಕ್ಕಾಚಾರವೇನಾದರು ಸರಿಯಾದರೆ,

ಬಿಎಸ್ಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ.ದಲಿತರಿಗೆ,ಅಲ್ಪಸಂಖ್ಯಾತರಿಗೆ ಹೆಚ್ಚು ಬಲ ಬರಲಿದೆ.

Leave a Reply