ಕನ್ನಡಿಗರ ಗರ್ವವನ್ನು ಇಮ್ಮಡಿಗೊಳಿಸಿದ ವಿರಾಟ್ ಶಕ್ತಿಯ ವಿಕಾಸ ಪರ್ವ ಸಮಾವೇಶ. ಕುಮಾರಸ್ವಾಮಿಯ ಶಕ್ತಿ ಪ್ರದರ್ಶನಕ್ಕೆ ಬೆಚ್ಚಿಬಿದ್ದ ಕಾಂಗ್ರೆಸ್ ಬಿಜೆಪಿ …

ಹೌದು.. ವಿಕಾಸ ಪರ್ವ ಸಮಾವೇಶದ ಅದ್ಬುತ ಯಶಸ್ಸು ಈ ಬಾರಿ ಚುನಾವಣೆಯಲ್ಲಿ ಪ್ರಾದೇಶಿಕತೆ ಹಾಗೂ ಕನ್ನಡಿಗರ ಸ್ವಾಭಿಮಾನ ಬಹಳ ದೊಡ್ಡದಾಗಿ ಕೆಲಸ ಮಾಡುವ ಎಲ್ಲಾ ಸೂಚನೆಯನ್ನು ತೋರಿಸುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಅವ್ರ ಸಮಾವೇಶಕ್ಕೆ ೨ ಲಕ್ಷ ಜನ ಸೇರಿಸಲು ತಿಣುಕಾಡುತ್ತಿರುವಾಗ ಕನ್ನಡಿಗರ ಏಕೈಕ ಪಕ್ಷ ಜೆಡಿಎಸ್ ಬರೋಬ್ಬರಿ ಹತ್ತು ಲಕ್ಷ ಜನರನ್ನು ಸೇರಿಸಿ ರಾಜ್ಯ ಹಾಗೂ ದೇಶಾದ್ಯಂತ ಎಲ್ಲರ ಹುಬ್ಬೇರುವಂತೆ ಮಾಡಿದೆ.

ನಮ್ಮ ಪ್ರಾದೇಶಿಕ ಪಕ್ಷವೆಂಬ ಅಭಿಮಾನವೇ ಹತ್ತು ಲಕ್ಷ ಜನರನ್ನು ರಾಜ್ಯದ ಎಲ್ಲೆಡೆಯಿಂದ ಸಮಾವೇಶಕ್ಕೆ ಬರುವ ಹಾಗೆ ಮಾಡಿದ ಪರಿ ಈ ಬಾರಿಯ ಚುನಾವಣೆ ಯಾವ ದಿಕ್ಕಿನೆಡೆಗೆ ಹೋಗುತ್ತಿದೆ ಇದೆ ಎಂದು ತೋರಿಸುತ್ತಿದೆ. ಕಳೆದ ೧೦ ವರ್ಷದಿಂದ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತ ನೋಡಿದ ಕನ್ನಡಿಗರು ಈ ಬಾರಿ ಪ್ರಾದೇಶಿಕ ಪಕ್ಷದ ಕಡೆ ವಾಲುತ್ತಿರುವುದು ಸ್ಪಷ್ಟವಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿಯ ಜಗಳದ ಮಧ್ಯೆ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷವನ್ನು ಮರೆತಿದ್ದ ರಾಜ್ಯದ ಮಾಧ್ಯಮಗಳೂ ಕೂಡ ಸಮಾವೇಶದ ಯಶಸ್ಸು ನೋಡಿ ಹೌಹಾರಿವೆ. ಜೆಡಿಎಸ್ ಪರ ರಾಜ್ಯದಲ್ಲಿ ಯಾವುದೋ ಒಂದು ಭಾವನೆ ಗುಪ್ತ ಗಾಮಿನಿಯಂತೆ ಕೆಲಸ ಮಾಡುತ್ತಿದೆ ಎಂದು ಎಲ್ಲರೂ ಹೇಳಲು ಪ್ರಾರಂಭ ಮಾಡಿದ್ದಾರೆ. ಜೆಡಿಎಸ್ ಸುದ್ದಿಗೆ ಅಷ್ಟು ಪ್ರಾಮುಖ್ಯ ಕೊಡದ ನ್ಯೂಸ್ ಚಾನಲ್ ಗಳು ಜೀವಮಾನದಲ್ಲಿ ಇಂಥ ಸಮಾವೇಶ ರಾಜ್ಯದಲ್ಲಿ ನೋಡಿರಲಿಲ್ಲ ಎಂದು ಹೇಳುತ್ತಿದ್ದಾರೆ ಅಂದ್ರೆ ಸಮಾವೇಶದ ಶಕ್ತಿ ಎಷ್ಟು ಇತ್ತು ಎಂಬುದನ್ನು ಗಮನಿಸಿ.

ಜೆಡಿಎಸ್ ಸಮಾವೇಶಕ್ಕೆ ರಾಜ್ಯದ ಎಲ್ಲೆಡೆಯಿಂದ ಜನರು ಬರುವ ಸುದ್ದಿಯನ್ನು ತಿಳಿದ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗಾದ್ರೂ ಮಾಡಿ ಈ ಸಮಾವೇಶವನ್ನು ವಿಫಲ ಮಾಡಲು ಯತ್ನಿಸಿತು. ಬಸ್ಸುಗಳನ್ನು ೫ ಕಿಲೋಮೀಟರ್ ದೂರದಲ್ಲೇ ನಿಲ್ಲಿಸಿ ಹಾಗೂ ಮುಂದೆ ಹೋಗಲು ಬಿಡದೇ ವಾಪಸು ಕಳಿಸುವ ವ್ಯರ್ಥ ಪ್ರಯತ್ನ ಮಾಡಿತು ಆದ್ರೆ ಪ್ರಾದೇಶಿಕ ಪಕ್ಷದ ಮೇಲಿನ ಪ್ರೀತಿ ಹಾಗೂ ಕುಮಾರಸ್ವಾಮಿ ಅವರ ಮೇಲಿನ ಅಭಿಮಾನಕ್ಕೆ ಜನರು ೬ ಕಿಮೀ ನಡೆದು ಸಮಾವೇಶ ತಲುಪಿದರು ಹಾಗೂ ರಾತ್ರಿ ೮ ಘಂಟೆ ಆದರೂ ಜನರು ಕದಲದೇ ಭಾಷಣ ಕೇಳಿದ್ದು ವಿಶೇಷವಾಗಿತ್ತು. ಹಿಂದೆ ನಡೆದ ಬಿಜೆಪಿ/ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಕುರ್ಚಿಗಳ ಕಾರುಬಾರು ಆದ್ರೆ ಜೆಡಿಎಸ್ ವಿಕಾಸ ಪರ್ವ ಸಮಾವೇಶದಲ್ಲಿ ಉತ್ಸಾಹಿ ಕಾರ್ಯಕರ್ತರದ್ದೇ ಕಾರುಬಾರು. ೧೦ ಲಕ್ಷ ಜನರು ಕನ್ನಡ ಮಾತೆಗೆ ಜಯಾಘೋಷ ಕೂಗುತ್ತಾ ಉತ್ಸಾಹದಿಂದ ಭಾಗವಹಿಸಿದ್ದು ನೋಡುವುದೇ ಕಣ್ಣಿಗೆ ಹಬ್ಬದಂತಿತ್ತು.

ಈ ಸಮಾವೇಶ ನೋಡಿದ ನಂತರ ಹಲವರ ಮನಸ್ಸಿನ್ನಲ್ಲಿ ಜೆಡಿಎಸ್ ಪಕ್ಷದ ಪರ ಗಾಳಿ ಬೀಸಲು ಪ್ರಾರಂಭವಾಗಿದೆ. ಹೌದು, ಕಾಂಗ್ರೆಸ್/ಬಿಜೆಪಿಗೆ ಒಂದು ಅವಕಾಶ ಕೊಟ್ಟು ಅವರಿಂದ ಕಹಿ ಉಂಡಿದ್ದೇವೆ ಒಮ್ಮೆ ನಮ್ಮದೇ ಪಕ್ಷಕ್ಕೆ ವೋಟು ಕೊಟ್ಟು ನೋಡೋಣ ಅನ್ನೋ ಭಾವನೆ ಜನರಲ್ಲಿ ವ್ಯಕ್ತವಾಗುತ್ತಿದೆ. ಇದು ರಾಜ್ಯಕ್ಕೆ ಮುಂದೆ ಬರುವ ಒಳ್ಳೆಯ ದಿನಗಳ ಮುನ್ಸೂಚನೆ ಎಂದೇ ಹೇಳಬಹುದು ಅಲ್ಲವೇ.

Leave a Reply