ವಿದ್ವತ್ ಯಾರು? V / S ನಲಪಾಡ್ ಯಾರು?

ವಿದ್ವತ್ ಯಾರು ಎಂಬ ಹುಡುಕುತ್ತಾ ಹೊರಟರೆ, ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದೆನಿಸಿರುವ ದಿವಾನ್ ಕೆ ಶೇಷಾದ್ರಿ ಅಯ್ಯರ್ ಅವರ ಕುಟುಂಬಸ್ಥ ಎಂದು ತಿಳಿದು ಬರುತ್ತದೆ.

ಮೈಸೂರು ಒಡೆಯರ ಕಾಲದಲ್ಲಿ 1883 ರಿಂದ 1901ರ ತನಕ ದಿವಾನರಾಗಿ ಕರ್ತವ್ಯ ನಿರ್ವಹಿಸಿದ ಶೇಷಾದ್ರಿ ಅಯ್ಯರ್ ಅವರ ಮರಿ ಮೊಮ್ಮಗನೇ ವಿದ್ವತ್. ಸಿಂಗಪುರದಲ್ಲಿ ಪದವಿ ಪಡೆದು ಅಲ್ಲೆ ಉದ್ಯೋಗ ಕೂಡಾ ಮಾಡಲು ಮುಂದಾಗಿದ್ದ ವಿದ್ವತ್, ಬೆಂಗಳೂರಿಗೆ ಈಗ ಬಂದಿದ್ದು ರಜೆಯ ವಿಹಾರಕ್ಕಾಗಿ, ಆದರೆ, ಯಾವ ಕೆಟ್ಟ ಗಳಿಗೆಯೋ ಏನೋ ಪರಿಚತ ನಲಪಾಡ್ ಗ್ಯಾಂಗಿನಿಂದಲೇ ಹೊಡೆತ ತಿನ್ನ ಬೇಕಾಯಿತು.

ಕೆಜಿಎಫ್, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರಿಗೆ ವಿದ್ಯುತ್ ಹರಿಸಿದ ಶಿವನಸಮುದ್ರ ಯೋಜನೆ, ಗಣ್ಯಾತಿಗಣ್ಯರ ವಾಸಸ್ಥಾನ ಕುಮಾರಕೃಪ ಗೆಸ್ಟ್ ಹೌಸ್, ಸೇರಿದಂತೆ ಕಟ್ಟಡಗಳು ದಿವಾನ್ ಶೇಷಾದ್ರಿ ಆಯ್ಯರ್ ಅವರ ಕಾಲದಲ್ಲಿ ತಲೆ ಎತ್ತಿದ್ದು ಎಂಬುದನ್ನು ಮರೆಯುವಂತಿಲ್ಲ. ದಿವಾನರ ಘನತೆ ಚ್ಯುತಿ ಬಾರದಂತೆ ಇಂದಿಗೂ ಈ ಕುಟುಂಬ ನಡೆದುಕೊಂಡು ಬಂದಿದೆ.

ಭದ್ರಾವತಿಯಿಂದ ಬೆಂಗಳೂರಿಗೆ ಬಂದು ಸಣ್ಣ ಮಟ್ಟದ ವ್ಯಾಪಾರ, ಗುತ್ತಿಗೆಗಳನ್ನು ಪಡೆಯುವ ಮೂಲಕ ಬೆಳದ ನಲಪಾಡ್ ಕುಟುಂಬ ಇಂದು ದೇಶ- ವಿದೇಶಗಳಲ್ಲಿ ಬೇಡದ ವಿಷಯಕ್ಕೆ ಚರ್ಚೆಗೊಳಲಾಗುತ್ತಿದೆ.ನಲಪಾಡ್ ಕುಟುಂಬದ ಮೊಹಮ್ಮದ್ ಹ್ಯಾರೀಸ್ ನಿಂದಾಗಿ ಕುಟುಂಬಕ್ಕೆ ಕಳಂಕ ಮೆತ್ತುಕೊಂಡಿದೆ.

 

 

Leave a Reply