ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿವೆ ‘3000 ‘ ಭೂತಗಳು …

3000 ಒಂದು ಕನ್ನಡದ ಭಯಾನಕ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ. ಈ ಚಿತ್ರವನ್ನು ರುಬ್ಬನಿ ಉರುಫ್ ಕೀರ್ಥಿ ನಿರ್ದೇಶಿಸಿದ್ದು, ಶಂಕರ್ ನಿರ್ಮಾಪಕರಾಗಿದ್ದಾರೆ. ಕ್ಲಾರೆನ್ಸ್ ಅಲೆನ್ ಡಿ’ಸೋಜಾ ಸಂಗೀತ ನೀಡಿದ್ದಾರೆ ಹಾಗು ಈ ಚಲನಚಿತ್ರದಲ್ಲಿ ಕ್ಸೇವಿಯರ್ ಸುಹನ್, ಗೌರೀಶ್ ಅಕ್ಕಿ, ಸ್ವಾತಿ, ಕೀರ್ತಿ ಸೇರಿದ್ದಾರೆ.

ಸದ್ಯ ಈ ಸಿನಿಮಾದ ಟ್ರೇಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. 3000 ಭೂತಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆಯಂತೆ. ಗೆಳೆಯರೆಲ್ಲರೂ ದ್ವೀಪಕ್ಕೆ ಪ್ರವಾಸ ಹೋದಾಗ ಅಲ್ಲಿ ಉಂಟಾಗುವ ಕೆಟ್ಟ ಅನುಭವ ಹಾಗೂ ಈ ಕೆಟ್ಟ ಶಕ್ತಿಯಿಂದ ಹೇಗೆ ಹೊರಬರುತ್ತಾರೆ ಎಂಬುದೇ ಈ ಸಿನಿಮಾ ಕಥೆಯಾಗಿದೆ.

Leave a Reply