ರೈಲು ಆಸನ ಮೀಸಲಾತಿ ಕುರಿತು ಸ್ತ್ರಿಯರಿಗೆ ಹಾಗು ವೃದ್ಧರಿಗೆ ಹೊಸ ಪ್ರಕಟಣೆ

ನಿಮ್ಮೆಲ್ಲರಿಗೂ ರೈಲಿನ ಆಸನ ಮೀಸಲಾತಿ ಸಮಸ್ಯೆ ತಿಳಿದೆ ಇದೆ. ಇದನ್ನು ಕುರಿತು ರೈಲ್ವೇ ಸಚಿವಾಲಯ ಹೊಸದೊಂದು ಪ್ರಕಟಣೆ ಹೊರಡಿಸಿದೆ. ಪ್ರಯಾಣಿಕರಿಗೆಂದು ಮೀಸಲಾಗಿರುವ ಆಸನಗಳು ಭರ್ತಿಯಾಗದೇ ಉಳಿದರೆ, ಅವುಗಳನ್ನು ಕಾಯುವಿಕೆ ಪಟ್ಟಿಯಲ್ಲಿರುವ ಮಹಿಳಾ ಪ್ರಯಾಣಿಕರಿಗೇ ನೀಡಲು ರೈಲ್ವೇ ಸಚಿವಾಲಯ ನಿರ್ಧರಿಸಿದ್ದು, ಅದಾಗಿಯೂ ಉಳಿದರೆ ಅನಂತರದ ಆದ್ಯತೆ ಹಿರಿಯ ನಾಗರಿಕರಿಗೆ ಸಿಗಲಿದೆ ಎಂದು ಹೇಳಿದೆ.

ಲಿಂಗ ಆಧರಿಸಿ ಆಸನ ನೀಡುವ ವ್ಯವಸ್ಥೆ ಈವರೆಗೆ ಇರಲಿಲ್ಲ. ರೈಲಿಗೆ ಮೀಸಲು ಆಸನಗಳ ಪಟ್ಟಿ ತಯಾರಿ ಸುವವರೆಗೂ ನಿಗದಿಯಾಗದೆ ಇರುವ ಆಸನ ಗಳನ್ನು ಕಾಯುವಿಕೆ ಪಟ್ಟಿಯಲ್ಲಿರುವವರಿಗೆ ನೀಡಲಾಗುವುದು. ಎಲ್ಲ ಸ್ಲೀಪರ್ ಕ್ಲಾಸ್‌ ರೈಲುಗಳಲ್ಲಿ ಮಹಿಳೆಯರಿಗಾಗಿ ಆಸನಗಳನ್ನು ಮೀಸಲು ಇರಿಸಲಾಗಿರುತ್ತದೆ. ಫೆಬ್ರವರಿ 15 ರಂದು ರೈಲ್ವೇ ಮಂಡಳಿ ಈ ಕುರಿತು ತ್ತೋಲೆ ಹೊರಡಿಸಿದೆ. ಅಲ್ಲದೆ, ಭರ್ತಿ ಯಾಗದೆ ಉಳಿದ ಆಸನಗಳನ್ನು ಮಹಿಳಾ ಪ್ರಯಾಣಿಕರು ಮತ್ತು ವೃದ್ಧರಿಂದ ಭರ್ತಿಯಾಗದೇ ಉಳಿದರೆ, ಅವುಗಳನ್ನು ಇತರ ಮಹಿಳಾ ಮತ್ತು ಹಿರಿಯ ನಾಗರಿಕರಿಗೆ ಹಂಚಿಕೆ ಮಾಡುವ ಜವಾಬ್ದಾರಿಯನ್ನು ವೃತ್ತಿಯಲ್ಲಿರುವ ಟಿಕೆಟ್‌ ಪರೀಕ್ಷಕ ಸಿಬಂದಿಗೆ ನೀಡುವಂತೆ ಹೇಳಲಾಗಿದೆ.

Leave a Reply