ಶ್ರೀದೇವಿ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ

ಮುಂಬಯಿ: ಶನಿವಾರ ದುಬೈನಲ್ಲಿ ಮೃತಪಟ್ಟ ಅತಿಲೋಕ ಸುಂದರಿ ಶ್ರೀದೇವಿ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನೆರವೇರಲಿದೆ.

ಈ ಕುರಿತು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.

ಮಂಗಳವಾರ ರಾತ್ರಿ ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ಕರೆತರಲಾಗುವುದು.ಇಂದು ರಾತ್ರಿ 9 ರ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಮೃತದೇಹದೊಂದಿಗೆ ಶ್ರೀದೇವಿ ಕುಟುಂಬ ಆಗಮಿಸಲಿದೆ.

ಅಂತೂ ಮೂರು ದಿನಗಳ ಬಳಿಕ ಶ್ರೀದೇವಿಯ ಪಾರ್ಥೀವ ಶರೀರದೊಂದಿಗೆ, ಆಕೆಯ ಕುಟುಂಬ ಭಾರತಕ್ಕೆ ಪಯಣ ಆರಂಭಿಸಿದೆ. ದುಬೈನಲ್ಲಿನ ಕಾನೂನು ಪ್ರಕ್ರಿಯೆ, ತನಿಖೆ ಪೂರ್ಣಗೊಂಡ ಬಳಿಕ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಇಂದು ಮಧ್ಯಾಹ್ನ ಕುಟುಂಬಕ್ಕೆ ಶ್ರೀದೇವಿ ಮೃತದೇಹವನ್ನ ಹಸ್ತಾಂತರಿಸಿತು.

ದುಬೈನಲ್ಲಿ ವಿದೇಶಿ ಪ್ರಜೆ ಮೃತಪಟ್ಟಾಗ, ಅನುಸರಿಸಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳು ಶ್ರೀದೇವಿ ಪ್ರಕರಣದಲ್ಲೂ ಅನುಸರಿಸಲಾಯಿತು. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಮೇಲೆ, ದುಬೈ ಪೊಲೀಸರ ತನಿಖೆ ಮುಗಿದ್ಮೇಲೆ, ಶ್ರೀದೇವಿ ಸಾವಿನ ಪ್ರಕರಣವನ್ನು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಕ್ಲೋಸ್ ಮಾಡಿ, ಕುಟುಂಬಕ್ಕೆ ಪಾರ್ಥೀವ ಶರೀರವನ್ನು ಹಸ್ತಾಂತರಿಸಿತು.

ಬುಧವಾರ ಬೆಳಗ್ಗೆ 9.30 ರಿಂದ 12.30ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಮುಂಬಯಿಯ ಲೋಖಂಡ್‌ವಾಲಾ ಕಾಂಪ್ಲೆಕ್ಸ್‌ನಲ್ಲಿ ಸ್ಫೋರ್ಟ್ಸ್ ಕ್ಲಬ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

 ನಂತರ 2 ಗಂಟೆ ಪಾರ್ಥಿವ ಶರೀರವನ್ನು ವಿಲ್ಲೆ ಪಾರ್ಲೆಯಲ್ಲಿರುವ ಪವನ್‌ ಹನ್ಸ್‌ಗೆ ಕೊಂಡೊಯ್ಯಲಾಗುವುದು. 3.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply