ಸೇಫ್ ಆಗಿ ಮರಳಿದ ಕೋತಿ ರಾಜ್ ..

ಜೋಗ ಜಲಪಾತದ ಗುಂಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನೊಬ್ಬನ ಶವ ಮೇಲಕ್ಕೆತ್ತಲೆಂದು ಜೋಗ ಜಲಪಾತದ ಗುಂಡಿಗೆ ಇಳಿದಿದ್ದ ಮಂಕಿ ಮ್ಯಾನ್‌ ಖ್ಯಾತಿಯ ಜ್ಯೋತಿ ರಾಜ್‌ ಅವರು ಬುಧವಾರ ಬೆಳಗ್ಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಕೋತಿರಾಮ ಮಧ್ಯಾಹ್ನ ಎರಡೂವರೆ ಸುಮಾರಿಗೆ ಜಲಪಾತದ ಮೇಲ್ಗಡೆ ಬಂದು ಕೆಳಗಿಳಿದವನು ಮತ್ತೆ ಮರಳಿರಲಿಲ್ಲ. ಸಿಗ್ನಲ್‌
ಸಿಗುವುದಿಲ್ಲ ಎಂಬ ಕಾರಣಕ್ಕೆ ತನ್ನ ಜೊತೆ ಮೊಬೈಲ್‌ ತೆಗೆದುಕೊಂಡು ಹೋಗಿರಲಿಲ್ಲ. ಅಲ್ಲದೆ ಆತ ಯಾವುದೇ ರೋಪ್‌ ಬಳಸದೆ ಜಲಪಾತದ ಕೆಳಗೆ ಇಳಿದಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸಿದ್ಧಾಪುರ, ಸಾಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಮಂಗಳವಾರ ಮಧ್ಯಾಹ್ನ ಜೋಗದ ಗುಂಡಿಗೆ ಇಳಿದಿದ್ದ ಸಾಹಸಿ ಕೋತಿರಾಜ್‌ ನಾಪತ್ತೆಯಾಗಿ ಯಾವುದೇ ಸಂಪರ್ಕಕ್ಕೆ ಸಿಗದೆ ಹೋಗಿದ್ದರು. ಅವರ ಪತ್ತೆಗಾಗಿ ಜ್ಯೋತಿರಾಜ್‌ ತಂಡದ ಹುಡುಗರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ರಾಜಾಫಾಲ್ಸ್‌ನ ಕೆಳಗೆ ಬೆಳಗ್ಗೆ ಪತ್ತೆಯಾಗಿದ್ದು ಆತಂಕ ದೂರವಾಗಿದೆ.ಅವರನ್ನು ಮೇಲಕ್ಕೆ ಕರೆತರಲಾಗುತ್ತಿದೆ.

ಸಾಹಸ ಮೆರೆದಿರುವ ಜ್ಯೋತಿ ರಾಜ್‌ ಈ ಹಿಂದೆ ಹಲವು ಮೃತದೇಹಗಳನ್ನು ಜೋಗದಿಂದ ಮೇಲಕ್ಕೆ ತಂದಿದ್ದರು. ಹಲವು ಕಟ್ಟಡಗಳನ್ನು ಚಕಚಕನೆ ಹತ್ತುವ ಮೂಲಕ ರಾಜ್ಯಾಧ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಜೋಗದ ಗುಂಡಿಗೆ ಇಳಿಯುವ ಮುನ್ನ ಸೆಲ್ಫಿ ವಿಡಿಯೋದಲ್ಲಿ ನಾನು ಸುರಕ್ಷಿತವಾಗಿ ಬರುತ್ತೇನೊ ಇಲ್ಲವೋ ಎಂದಿದ್ದರು. ಆ ಬಳಿಕ ನಾಪತ್ತೆಯಾಗಿರುವದು ಅವರ ಬಂಧುಗಳು ತೀವ್ರವಾಗಿ ಆತಂಕಗೊಳ್ಳಲು ಕಾರಣವಾಗಿತ್ತು. ಇದೇ ವರ್ಷ ಜ್ಯೋತಿರಾಜ್‌ ವೈವಾಹಿಕ ಜಿವನಕ್ಕೂ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ.

 

Leave a Reply