ಕಣ್ಣುಗಳನ್ನು ದಾನ ಮಾಡಿ ಅಭಿಮಾನಿಗಳಿಗೆ ಆದರ್ಶವಾದ ನಟಿ ಅಮಲಾ ಪೌಲ್

ಹೆಬ್ಬುಲಿ ಖ್ಯಾತಿಯ ನಟಿ ಅಮಲಾ ಪೌಲ್ ಈಗ ನೇತ್ರದಾನ ಮಾಡಿದ್ದಾರೆ. ಪಾಂಡಿಚೇರಿಯಲ್ಲಿ ಇರುವ ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ ಅಮಲಾ ಪೌಲ್ ಅದೇ ವೇಳೆ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.ತಮ್ಮ ಕಣ್ಣುಗಳನ್ನು ದಾನ ಮಾಡಿ ಎಲ್ಲರಿಗೂ ಆದರ್ಶವಾಗಿದ್ದಾರೆ.

ಕಣ್ಣುಗಳನ್ನು ಕುರಿತು ಅಮಲಾ ಹೀಗೆ ಹೇಳಿದ್ದಾರೆ ”ಪ್ರತಿಯೊಬ್ಬರು ತಮ್ಮ ಕಣ್ಣುಗಳಿಂದ ಪ್ರಪಂಚವನ್ನು ನೋಡಬೇಕು. ಪ್ರಕೃತಿ ಸೌಂಧರ್ಯವನ್ನು, ಬಣ್ಣಗಳನ್ನು ಕಾಣಬೇಕು. ಅಲ್ಲದೆ ಇಡೀ ಪ್ರಪಂಚದಲ್ಲಿ ಭಾರತ ಅತಿ ಹೆಚ್ಚು ಕುರುಡರಿರುವ ದೇಶಗಳ ಪೈಕಿ ಒಂದಾಗಿದೆ. ಆ ಕಾರಣ ಎಲ್ಲರೂ ನೇತ್ರದಾನ ಮಾಡಬೇಕು”. ಇದೇ ಕಾರಣದಿಂದ ಅವರು ನೇತ್ರದಾನ ಮಾಡಿದ್ದಾರಂತೆ. ಅಮಲಾ ಪೌಲ್ ಅವರ ಈ ಒಳ್ಳೆಯ ಕೆಲಸಕ್ಕೆ ಅವರ ಅಭಿಮಾನಿಗಳು ಕೂಡ ಹೆಮ್ಮೆ ಪಡುತ್ತಿದ್ದಾರೆ.

ಹಲವಾರು ಖ್ಯಾತ ನಟ – ನಟಿಯರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಪಟ್ಟಿಯಲ್ಲಿ ಕನ್ನಡದ ವರ ನಟ, ಅಮಿತಾಭ್ ಬಚ್ಚನ್, ಅಮಿರ್ ಖಾನ್, ಪ್ರಿಯಾಂಕ ಚೋಪ್ರಾ, ಐಶ್ವರ್ಯ ರೈ ಸೇರಿದಂತೆ ಕೆಲವು ದೊಡ್ಡ ದೊಡ್ಡ ಸ್ಟಾರ್ ಗಳು ತಮ್ಮ ಕಣ್ಣುಗಳನ್ನು ದಾನ ಮಾಡಿ ತಮ್ಮ ಅಭಿಮಾನಿಗಳಿಗೆ ನಿಜವಾದ ಆದರ್ಶವಾಗಿದ್ದಾರೆ.

Leave a Reply