ನಿತೀಶ್‌ ಕುಮಾರ್‌ 67ನೇ ಹುಟ್ಟುಹಬ್ಬಕ್ಕೆ ಅಭಿನಂದಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರಿಂದು ತಮ್ಮ ಅತ್ಯುತ್ತಮ ಸ್ನೇಹಿತ ಹಾಗೂ ಬಿಹಾರದ ಕ್ರಿಯಾಶೀಲ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಟ್ವಿಟರ್‌ ಮೂಲಕ 67ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದರು.

ನಿತೀಶ್‌ ಕುಮಾರ್‌ ಅವರು ತಮ್ಮೆಲ್ಲ ಬದ್ಧತೆಗಳೊಂದಿಗೆ ಯಾವತ್ತೂ ದೇಶ ಸೇವೆ ನಿರತ ನಾಯಕನಾಗಿದ್ದಾರೆ. ಬಿಹಾರವನ್ನು ಸರ್ವತೋಮುಖವಾಗಿ ಪರಿವರ್ತಿಸುವಲ್ಲಿನ ಅವರ ಪಾತ್ರ ಗಮನಾರ್ಹವಾದುದು. ನಿತೀಶ್‌ ಗೆ ದೀರ್ಘಾಯು ಮತ್ತು ಆರೋಗ್ಯವನ್ನು ದೇವರು ಕರುಣಿಸಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಕೃಪೆ : ಉದಯವಾಣಿ

Leave a Reply