ಏರ್‍ಸೆಲ್ ನಿಂದ ನ್ಯಾಯಾಲಯದ ಮೊರೆ ಹೋದ ಮಲೇಷ್ಯಾದ ಉದ್ಯಮಿ

ಮಲೇಷ್ಯಾದ ಖ್ಯಾತ ಉದ್ಯಮಿಯೊಬ್ಬರು ಏರ್‍ಸೆಲ್ ಕಮ್ಯುನಿಕೇಷನ್ ನಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆ ಖ್ಯಾತ ಉದ್ಯಮಿಯ ಹೆಸರು ಟಿ.ಆನಂದಕೃಷ್ಣನ್. ಅನೇಕ ಉದ್ಯಮಗಳ ನಿರ್ವಹಣೆಯಲ್ಲಿ ಇವರದು ಪಳಗಿದ ಕೈ. ಭಾರತದಲ್ಲಿ ತಮ್ಮ ಅದೃಷ್ಟ ಮತ್ತಷ್ಟು ಖುಲಾಯಿಸಬಹುದೆಂಬ ನಿರೀಕ್ಷೆಯೊಂದಿಗೆ ಏರ್‍ಸೆಲ್ ಕಮ್ಯುನಿಕೇಷನ್ ಸಂಸ್ಥೆ ಮೇಲೆ ಭಾರೀ ಬಂಡವಾಳ ಹೂಡಿದ್ದರು.

ಬಂಡವಾಳ ಹೂಡಿದಕ್ಕೆ ಇವರು ಈಗ ಪಶ್ಚಾತ್ತಾಪ ಪಡುವಂತಾಗಿದೆ. ಏರ್‍ಸೆಲ್ ದಿವಾಳಿಯಾಗಿದ್ದು, ಮಲೇಷ್ಯಾ ಉದ್ಯಮಿ 7 ಶತಕೋಟಿ ಡಾಲರ್ ಅಂದರೆ ಸುಮಾರು 4562 ಕೋಟಿ ರೂ. ಕಳೆದುಕೊಂಡ ಕಂಗಾಲಾಗಿದ್ದಾರೆ. ಏರ್‍ಸೆಲ್ ಈಗಾಗಲೇ 16 ಸಾವಿರ ಕೋಟಿ ನಷ್ಟ ಅನುಭವಿಸಿದ್ದು, ದಿವಾಳಿತನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Leave a Reply