ಬೆಂಗಳೂರಿಗೆ ಬರುತಿದೆ ಎಲೆಕ್ಟ್ರಿಕ್ ಬಸ್ …

2014 ರಲ್ಲಿ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಶನ್ (BMTC) ದೇಶದ ಮೊದಲ ವಿದ್ಯುತ್ ಬಸ್ ಅನ್ನು ಬೆಳೆಯುತ್ತಿರುವ ಜನಸಂಖ್ಯೆಗೆ ಸ್ವಚ್ಛ ಸಾರ್ವಜನಿಕ ಸಾರಿಗೆಯನ್ನು ಪರಿಚಯಿಸುವ ಪ್ರಯತ್ನದಲ್ಲಿ ಅನಾವರಣಗೊಳಿಸಿತು. ಹೆಚ್ಚಿನ ಹೂಡಿಕೆಯ ವೆಚ್ಚದ ಕಾರಣ ಕಲ್ಪನೆಯು ಕಾರ್ಯರೂಪಕ್ಕೆ ಬರಲಿಲ್ಲ. ಸುಮಾರು ಮೂರು ವರ್ಷಗಳ ನಂತರ ಯೂನಿಯನ್ ಸರ್ಕಾರದ ಸಹಾಯದಿಂದ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ಪ್ರಯಾಣಿಕರಿಗೆ ವಿದ್ಯುತ್ ಬಸ್ಸುಗಳನ್ನು ಜಾರಿಗೆ ತಂದಿದೆ.ಪರಿಸರ ಸ್ನೇಹಿ ವಾಹನವನ್ನು ರಸ್ತೆಯಲ್ಲಿ ಬೆಂಗಳೂರು ಮೊದಲ ಬಾರಿಗೆ ಪರಿಚಯಿಸುತ್ತಿದೆ.

ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಶನ್ (ಬಿಎಂಟಿಸಿ) 150 ಎಲೆಕ್ಟ್ರಿಕ್ ಬಸ್ಗಳನ್ನು ಸಂಗ್ರಹಿಸಲು ಟೆಂಡರ್ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಈ ಬಸ್ಗಳು ವೆಚ್ಚ ಸುಮಾರು 3 ರಿಂದ 3 ಕೋಟಿ ರೂ. ಆಗಿದ್ದು ಒಂದು ದೊಡ್ಡ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ಬಂಡವಾಳವನ್ನು ಹೂಡಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮದವರು ಗುತ್ತಿಗೆ ಆಧಾರದಡಿ ಬಸ್ ಪಡೆಯಲು ಆಹ್ವಾನಿಸಿದ್ದ ಜಾಗತಿಕ ಟೆಂಡರ್ ನಲ್ಲಿ ಪಾಲ್ಗೊಂಡಿದ್ದ 7 ಕಂಪನಿಗಳ ಪೈಕಿ ಅಂತಿಮವಾಗಿ ಹೈದರಾಬಾದ್ ಮೂಲದ ಗೋಲ್ಡ್ ಸ್ಟೋನ್ ಕಂಪನಿ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಎಲ್ಲ ಪ್ರಕ್ರಿಯೆಗಳು ಸುಗಮವಾಗಿ ನಡೆದರೆ, ಮುಂದಿನ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್’ಗಳು ನಗರದ ರಸ್ತೆಗಿಳಿಯಲಿವೆ. ಕೇಂದ್ರ ಸರ್ಕಾರ 150 ಎಲೆಕ್ಟ್ರಿಕ್ ಬಸ್ ಗಳಿಗೆ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮೊದಲ ಹಂತದಲ್ಲಿ 40 ಎಲೆಕ್ಟ್ರಿಕ್ ಬಸ್ ಗಳಿಗೆ ಮಾತ್ರ ಅನುದಾನ ನೀಡುವುದಾಗಿ ಹೇಳಿದೆ. ಹೀಗಾಗಿ, ಬಿಎಂಟಿಸಿಯವರು ಮೊದಲಿಗೆ 40 ಬಸ್ ಗಳನ್ನು ಗುತ್ತಿಗೆ ಪಡೆಯಲು ನಿರ್ಧರಿಸಿದ್ದಾರೆ. ಗೋಲ್ಡ್ ಸ್ಟೋನ್ ಕಂಪನಿ 12 ಮೀಟರ್ ಉದ್ದವಿರುವ 41 ಸೀಟುಗಳ ಎಲೆಕ್ಟ್ರಿಕ್ ಬಸ್ ಗುತ್ತಿಗೆ ನೀಡಲಿದೆ. ಇದಕ್ಕೆ ಪ್ರತಿ ಕಿ.ಮೀಗೆ 37.5 ರೂಪಾಯಿ ಪಡೆಯಲಿದೆ. ಬಿಎಂಟಿಸಿ ಸಂಸ್ಥೆ ವಿದ್ಯುತ್ ಮತ್ತು ನಿರ್ವಾಹಕನ ವೆಚ್ಚ ಭರಿಸಬೇಕು. ಕಂಪನಿಗೆ ನೀಡುವ ಮೊತ್ತ ಹಾಗೂ ವಿದ್ಯುತ್ ಹಾಗೂ ನಿರ್ವಾಹಕನ ವೆಚ್ಚ ಸೇರಿ ಬಿಎಂಟಿಸಿಗೆ ಪ್ರತಿ ಕಿ.ಮೀ.ಗೆ 55ರಿಂದ 58 ರು. ವೆಚ್ಚವಾಗಲಿದೆ. ಫೇಮ್ ಯೋಜನೆಯಡಿ ಒಂದು ಬಸ್ ಗೆ ಸುಮಾರು 1 ಕೋಟಿ ರೂಪಾಯಿ ಕೇಂದ್ರ ಸರ್ಕಾರದ ಅನುದಾನ ಸಿಗುವುದರಿಂದ ಬಿಎಂಟಿಸಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.

Leave a Reply