ಕೋಟಿಗೊಬ್ಬ3 ಸಿನಿಮಾಗೆ ಅದ್ದೂರಿ ಚಾಲನೆ

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ3 ಸಿನಿಮಾಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕಳೆದ ವರ್ಷ ಬಾಕ್ಸ್ ಆಫೀಸ್ ನಲ್ಲಿ ಬಾರಿ ಸದ್ದು ಮಾಡಿದ್ದ ಕೋಟಿಗೊಬ್ಬ2 ಸಿನಿಮಾದ ನಂತ್ರ ಅದೇ ನಿರ್ಮಾಪಕರು ಹಾಗೂ ಕಿಚ್ಚ ಸೇರಿ ಕೋಟಿಗೊಬ್ಬ3 ಚಿತ್ರ ಮಾಡಲು ನಿರ್ಧಾರ ಮಾಡಿದ್ದಾರೆ. ಸಾಕಷ್ಟು ವಿಚಾರಗಳಿಂದ ಈಗಾಗಲೇ ಭಾರಿ ಸುದ್ದಿ ಮಾಡಿರುವ ಕೋಟಿಗೊಬ್ಬ3 ಸಿನಿಮಾ ಆರಂಭದಲ್ಲೇ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿನ್ನೆಯಿಂದಲೇ ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ

ನವ ನಿರ್ದೇಶಕ ಶಿವ ಕಾರ್ತಿಕ್ ಕೋಟಿಗೊಬ್ಬ3 ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ ಈ ತಿಂಗಳ ಅಂತ್ಯಕ್ಕೆ ಸಿನಿಮಾ ಚಿತ್ರೀಕರಣ ಶುರು ಮಾಡಬೇಕೆಂದು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಕೋಟಿಗೊಬ್ಬ3 ಸಿನಿಮಾ ಮಹೂರ್ತ ಇಂದು ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರುವ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ನಡೆದಿದೆ. ಪೂಜೆಯಲ್ಲಿ ಸುದೀಪ್ ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರು ಭಾಗಿ ಆಗಿದ್ದಾರೆ. ಸಿನಿಮಾ ಮಹೂರ್ತದಲ್ಲಿ ಸುದೀಪ್ ಅವರ ತಂದೆ ಹಾಗೂ ಪತ್ನಿ ಭಾಗಿ ಆಗಿದ್ದರು. ಚಿತ್ರಕ್ಕೆ ಸುದೀಪ್ ತಂದೆ ಕ್ಯಾಮೆರಾ ಸ್ವಚ್ ಆನ್ ಮಾಡಿದ್ರೆ ಪತ್ನಿ ಪ್ರಿಯಾ ದೀಪ ಬೆಳಗಿಸಿ ಚಿತ್ರಕ್ಕೆ ಶುಭ ಕೋರಿದರು. ಸುದೀಪ್ ಫ್ಯಾಮಿಲಿ ಜೊತೆಯಲ್ಲಿ ಚಿತ್ರರಂಗದ ಕಡೆಯಿಂದ ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್ , ಸಿ ಆರ್ ಮನೋಹರ್ ಇನ್ನೂ ಅನೇಕರು ಭಾಗಿ ಆಗಿದ್ದರು.

Leave a Reply