ಮೋದಿಯವರಿಂದ ಮಯೂರಿ ಗೆ ಉಡುಗೊರೆ …

ಮಯೂರಿ ತಮ್ಮದೇ ಆದ ನೃತ್ಯ ತಂಡವನ್ನ ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ನಾಟ್ಯವನ್ನ ಪ್ರದರ್ಶನ ಮಾಡುತ್ತಾರೆ ಅಷ್ಟೇ ಅಲ್ಲದೆ ಸಿನಿಮಾಗಳಿಗೂ ಕೋರಿಯೋಗ್ರಾಫ್ ಮಾಡುವುದರ ಜೊತೆಯಲ್ಲಿ ರಿಯಾಲಿಟಿ ಶೋನಲ್ಲಿಯೂ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ದೇಶದಾದ್ಯಂತ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ನೃತ್ಯವನ್ನು ಪ್ರದರ್ಶನ ಮಾಡಿ ಕಲೆಯ ಕಂಪನ್ನು ಪಸರಿಸಿರುವ ನಾಟ್ಯ ಮಯೂರಿ ಅಂತಾನೇ ಫೇಮಸ್ ಆದವರು.

ಮೇಕ್ ಇನ್ ಇಂಡಿಯಾ ಥೀಮ್ ನಲ್ಲಿ ರೆಡಿಯಾಗಿರುವ ಕೈ ಗಡಿಯಾರವನ್ನ ಮಯೂರಿ ಅವರಿಗೆ ಕಳುಹಿಸಿಕೊಟ್ಟಿದ್ದು ಉಡುಗೊರೆಯನ್ನ ಪಡೆದ ಮಯೂರಿ ಈ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಮಯೂರಿ ಉಪಾಧ್ಯಾಯ ಅವರಿಗೆ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿಗಳ ಕಡೆಯಿಂದ ವಿಶೇಷವಾದ ಉಡುಗೊರೆಯೊಂದು ಸಿಕ್ಕಿದೆ. ಈ ಬಗ್ಗೆ ಮಯೂರಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರಿಂದ ಉಡುಗೊರೆ ಬಂದಿರುವುದು ಬೆಲೆ ಕಟ್ಟಲು ಸಾಧ್ಯವಾಗದೆ ಇರುವಂತದ್ದು ಎಂದು ಮಯೂರಿ ಟ್ವಿಟ್ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಮಯೂರಿ ಅವರ ತಂಡದಿಂದ ನೃತ್ಯವನ್ನ ಪ್ರದರ್ಶನ ಮಾಡಲಾಗಿತ್ತು.

Leave a Reply