ನಟಿ ಕಸ್ತೂರಿ ಶಂಕರ್ ಸನ್ನಿ ಲಿಯೋನ್ ಬಗ್ಗೆ ವಿವಾದಾತ್ಮಕ ಟ್ವೀಟ್..

ತಮಿಳು ನಟಿ ಕಸ್ತೂರಿ ಶಂಕರ್ ಸದಾ ಏನಾದರೊಂದು ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕಮಲ್ ಹಾಸನ್ ರಾಜಕೀಯ ಪ್ರವೇಶದ ಕುರಿತು ಟ್ವೀಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೊಂದು ಅಂತದ್ದೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಟಿ ಕಸ್ತೂರಿ ಶಂಕರ್ ಸನ್ನಿ ಲಿಯೋನ್ ಬಗ್ಗೆ ಮಾಡಿರುವ ಟ್ವೀಟ್ ಈಗ ಮತ್ತೆ ಎಲ್ಲರ ಕಂಗೆಣ್ಣಿಗೆ ಗುರಿಯಾಗುವಂತೆ ಮಾಡಿದೆ.

‘ಶ್ರೀದೇವಿ ಮೃತಪಟ್ಟರೆಂದು ಎಲ್ಲಾ ಸುದ್ದಿ ವಾಹಿನಿಗಳು ಅವರಿಗೆ ಸಂಬಂಧಿಸಿದ ಹಾಡು, ವೀಡಿಯೋಗಳನ್ನು ಪ್ರಸಾರ ಮಾಡುತ್ತಿವೆ. ಒಂದು ವೇಳೆ ಸನ್ನಿ ಲಿಯೋನ್ ಮೃತಪಟ್ಟರೆ ಆಗ ಏನು ಮಾಡುತ್ತೀರಿ’ ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದರ ಕುರಿತು ಸ್ಪಷ್ಟೀಕರಣ ನೀಡಿರುವ ಕಸ್ತೂರಿ ಶಂಕರ್, ಫೇಸ್‌ಬುಕ್‌ನಲ್ಲಿ ಬಂದಂತಹ ಜೋಕ್ ಒಂದನ್ನು ತಾನು ಹಂಚಿಕೊಂಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

ಕೃಪೆ : ವೆಬ್‌ದುನಿಯಾ

Leave a Reply