ಡಸ್ಟ್ ಬಿನ್ಗೆ ಇರುವ ಬೆಲೆ, ಬಿಜೆಪಿ ಆರೋಪಕ್ಕಲ್ಲ: ಜಾರ್ಜ್

ಬೆಂಗಳೂರು: ಪರಿವರ್ತನೆ ಯಾತ್ರೆಗೆ ಬೆಂಬಲ ಸಿಗದೇ , ಬೆಂಗಳೂರು ಉಳಿಸಿಕೊಳ್ಳುವ ತವಕದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಶಾಂತಿಯ ನೆಲವೀಡಾಗಿದ್ದ ರಾಜಧಾನಿ ಬೆಂಗಳೂರು ಗೂಂಡಾರಾಜ್‌ ಆಗಿ ಪರಿವರ್ತನೆಯಾಗುತ್ತಿದೆ ಎಂದು ಆರೋಪಿಸಿ ಸೇವ್ ಬೆಂಗಳೂರು ಹೆಸರಲ್ಲಿ ರಾಜ್ಯ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದೆ.

ಬಿಜೆಪಿ ನಾಯಕರುಗಳಾದ, ಪ್ರಕಾಶ್ ಜಾವ್ಡೇಕರ್, ಅನಂತ್ ಕುಮಾರ್, ಹಾಗೂ ಮಾಜಿ ಡಿಸಿಎಂ ಆರ್ ಆಶೋಕ ಪಾದಯಾತ್ರೆಯಲ್ಲಿ ಭಾಗವಹಿಸಿ,ಕಾಂಗ್ರೆಸ್ ಗೂಂಡಾ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಬಸವನಗುಡಿ ವಿಧಾನಸಭಾ ಕ್ಷೇತ್ರದ ಗವಿಗಂಗಾಧರೇಶ್ವರ ದೇವಾಲಯಲ್ಲಿ ಪೂಜೆ ನಂತರ ಪಾದಯಾತ್ರೆ ಆರಂಭಿಸಲಾಯಿತು, ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೋಂಡಿದ್ದರು.

ಕಾಂಗ್ರೆಸ್ ನ ಗೂಂಡಾ ಸರ್ಕಾರದ ಬಗ್ಗೆ ಮನೆ ಮನೆಗೂ ತೆರಳಿ ವಿವರಣೆ ನೀಡಿದರು, ಇನ್ನೂ ಕೆಪಿಸಿಸಿ ಕಾರ್ಯದರ್ಶಿ ಎನ್ ಜಿ ಬಲರಾಮ್ ಬಿಜೆಪಿ ಪಾದಯಾತ್ರೆ ವಿರೋಧಿಸಿ ಹನುಮಂತ ನಗರದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರು, ಪೊಲೀಸರ ಬಿಗಿ ಭದ್ರತೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.
ಇನ್ನೂ ಬಿಜೆಪಿ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ ಜಾರ್ಜ್ ಕಾಂಗ್ರೆಸ್ ವಿರುದ್ಧ ಬಿಜೆಪಿ ಸುಳ್ಳಿನ ಕಂತೆಯನ್ನು ಸೃಷ್ಟಿಸಿದೆ, ಡಸ್ಟ್ ಬಿನ್ ಗಾದರೂ ಸ್ವಲ್ಪ ಬೆಲೆಯಿದೆ, ಆದರೆ ಬಿಜೆಪಿಯ ಆರೋಪಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ದೂರಿದ್ದಾರೆ,
ನಗರದಲ್ಲಿ ಕಸದ ಸಮಸ್ಯೆ, ಟ್ರಾಪಿಕ್ ಜಂಜಾಟ, ಕೆರೆಗಳ ಸಮಸ್ಯೆಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರ ರ್ಯಾಲಿಗಳಿಗೆ ಹೆಚ್ಚಿನ ಪ್ರತಿಕ್ರಿಯೆ ಸಿಗುತ್ತದೆಂದು ನಂಬಿ, ಕರ್ನಾಟಕದಾದ್ಯಂತ ಸರಣಿ ರ್ಯಾಲಿಗಳನ್ನು ಹಮ್ಮಿಕೊಂಡರು ಆದರೆ, ರ್ಯಾಲಿಗಳಿಗೆ ಯಶಸ್ಸು ಸಿಗಲಿಲ್ಲ ಎಂದು ಜಾರ್ಜ್ ಟೀಕೀಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಗದದ ಹುಲಿ, ಮೋದಿ ಸೌಮ್ಯವಾದ ಸಿಂಹ ಎಂದು ಟೀಕಿಸಿದ್ದಾರೆ, ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಮೋದಿ ಆರೋಪಿಸಿದ್ದಾರೆ, ಆದರೆ ಪ್ರಧಾನಿಯೊಬ್ಬರಿಂದ ಇಂಥಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

Leave a Reply