ಏರ್‌ಪೋರ್ಟ್‌ ಗೆ ನಿರೀಕ್ಷಿತ ಪರ್ಯಾಯ ಮಾರ್ಗ

ಮಹಾನಗರದಿಂದ ಏರ್‌ಪೋರ್ಟ್‌ ತಲುಪಲು ಪ್ರಯಾಸ ಪಡುತ್ತಿದ್ದ ನಾಗರಿಕರು ಈಗ ಪಾರ್ಯಾಯ ಮಾರ್ಗದ ಮೂಲಕ ಕೆಐಎಎಲ್‌ಗೆ ಪ್ರಯಾಣಿಸಬಹುದು. ಇದರಿಂದಾಗಿ ಬಹು ನಿರೀಕ್ಷಿತ ಪರ್ಯಾಯ ಮಾರ್ಗ ಬಳ್ಳಾರಿ ರಸ್ತೆ ಮೇಲಿನ ಸಂಚಾರದ ಒತ್ತಡವನ್ನು ತಗ್ಗಿಸುವ ನಿರೀಕ್ಷೆ ಇದೆ.

ಹಾಲಿ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಏರ್‌ಪೋರ್ಟ್‌ ಪ್ರಯಾಣ ತ್ರಾಸದಾಯಕವಾಗಿತ್ತು. ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ದಟ್ಟಣೆ ಕಾಣುತ್ತಿರುವ ವಿಮಾನನಿಲ್ದಾಣ ವಿಸ್ತರಣೆಗೆ ಅವಕಾಶ ಇದೆ. ಇದರ ಹೊರತಾಗಿಯೂ ನಗರದಿಂದ ಏರ್‌ಪೋರ್ಟ್‌ ತಲುಪುವುದು ಸಾಹಸದ ಕೆಲಸವಾಗಿದೆ. ಸಾದಹಳ್ಳಿ ಟೋಲ್‌ ಗೇಟ್‌ ಬಳಿ ವಾಹನಗಳ ಸಾಲು ನಿಲ್ಲುವ ಕಾರಣ ಏರ್‌ಪೋರ್ಟ್‌ ಅನ್ನು ಸಮಯಕ್ಕೆ ಸರಿಯಾಗಿ ತಲುಪಲು ಆಗುತ್ತಿಲ್ಲ. ಮಾರ್ಗ ಮಧ್ಯೆಯೂ ಹಲವು ಕಡೆ ಅಡೆತಡೆ ಇರುವುದರಿಂದ ತ್ವರಿತವಾಗಿ ಪ್ರಯಾಣಿಸಲು ಪರ್ಯಾಯ ಮಾರ್ಗಕ್ಕಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಸರಕಾರವನ್ನು ಒತ್ತಾಯಿಸಿದ್ದರು.

ಕೃಪೆ : ವಿಜಯ ಕರ್ನಾಟಕ

Leave a Reply