ಇನ್ಕ್ರೆಡಿಬಲ್ ಇಂಡಿಯಾ ಆಂದೋಲನದ ಭಾಗವಾಗಿ ಶಿವನ ಪ್ರತಿಮೆ

ಕೊಯಮತ್ತೂರಿನ ಈಶಾ ಯೋಗಾ ಸೆಂಟರ್ನಲ್ಲಿರುವ 112 ಅಡಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ‘ಇನ್ಕ್ರೆಡಿಬಲ್ ಇಂಡಿಯಾ’ ಆಂದೋಲನದ ಭಾಗ ಎಂದು ಪ್ರವಾಸೋದ್ಯಮ ಸಚಿವಾಲಯ ಘೋಷಿಸಿದೆ.

ಈಶಾ ಫೌಂಡೇಶನ್ ಸಂಸ್ಥಾಪಕರಾದ ಜಗ್ಗಿ ವಾಸುದೇವ್ ಮಾತನಾಡಿ ‘ಆದಿಯೋಗಿಯ ಅದ್ಭುತವಾದ ಮುಖವು ಉತ್ಸಾಹ, ಸ್ಥಿರತೆ, ಮೃದುತ್ವವನ್ನು ಪಸರಿಸುತ್ತದೆ. ಇದೀಗ ಆದಿಯೋಗಿ ಪ್ರತಿಮೆ ಇನ್ಕ್ರೆಡಿಬಲ್ ಇಂಡಿಯಾ ಆಂದೋಲನದ ಭಾಗವಾಗಿದೆ. ಇದರ ನಿರ್ಮಾಣಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು’ಎಂದರು.

ವಿಶ್ವದ ಅತಿದೊಡ್ಡ ಶಿವನ ಪ್ರತಿಮೆಯನ್ನು ಕಳೆದ ವರ್ಷ ಫೆ.24ರಂದು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದು, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿತ್ತು.

Image result for adiyogi shiva statue coimbatore

Leave a Reply