ಹಸೆಮಣೆ ಏರಲಿರುವ ಸಜ್ಜಾಗಿರುವ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ

ಮುಖೇಶ್ ಅಂಬಾನಿ, ದೇಶದ ಅಗರ್ಭ ಶ್ರೀಮಂತರಲ್ಲಿ ಒಬ್ಬರು. ಈ ಖ್ಯಾತ ಉದ್ಯಮಿಯ ಮಗ ಆಕಾಶ್ ಅಂಬಾನಿ ಶೀಘ್ರವೇ ಸಪ್ತಪದಿ ತುಳಿಯಲಿದ್ದಾರೆ. ಮುಖೇಶ್ ಅಂಬಾನಿಗೆ ಮೂವರು ಮಕ್ಕಳಿದ್ದು, ಆಕಾಶ್, ಇಶಾ, ಮತ್ತು ಅನಂತ್, ಆಕಾಶ್ ಮತ್ತು ಇಶಾ ಅವಳಿ ಮಕ್ಕಳಾಗಿದ್ದಾರೆ.

ಮೂಲಗಳ ಪ್ರಕಾರ ಮುಖೇಶ್ ಅಂಬಾನಿ ಪುತ್ರ ಆಕಾಷ್ ರೋಸಿ ಬ್ಲೂ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಸೆಲ್ ಮೆಹ್ತಾ ಪುತ್ರಿ ಶ್ಲೋಕ ಅವರನ್ನು ವರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಕಾಶ್ ರಿಲಾಯನ್ಸ್ ಜಿಯೋ ಮುಖ್ಯಸ್ಥನಾಗಿದ್ದು, ಶ್ಲೋಕ ರೋಸಿ ಬ್ಲೂ ಫೌಂಡೇಶನ್ ನ ನಿರ್ದೇಶಕಿಯಾಗಿದ್ದಾರೆ. ಶ್ಲೋಕ ರಸೆಲ್ ಮೆಹ್ತಾ ಮತ್ತು ಮೋನಾ ಅವರ ಕಿರಿಯ ಮಗಳು.

ರೋಸಿ ಬ್ಲೂ ಇಂಡಿಯಾ ದೇಶದ ಪ್ರಸಿದ್ಧ ವಜ್ರದ ಕಂಪನಿಗಳಲ್ಲೊಂದಾಗಿದೆ. ಆದರೆ ಈ ವಿಷಯದ ಬಗ್ಗೆ ಎರಡು ಕುಟುಂಬಗಳು ಎಲ್ಲಿಯೂ ಯಾವುದೇ ಮಾಹಿತಿಯನ್ನು ನೀಡಿಲ್ಲ, ಶೀಘ್ರವೇ ನಿಶ್ಚಿತಾರ್ಥ ನಡೆಯಲಿದ್ದು, ಡಿಸೆಂಬರ್ ನಲ್ಲಿ ಮದುವೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Image result for mukesh ambani

 

Leave a Reply