‘ಶೇಪ್ ಆಫ್ ವಾಟರ್’ ಗೆ 2018ನೇ ಸಾಲಿನ ಆಸ್ಕರ್ – ಅತ್ಯುತ್ತಮ ಚಿತ್ರ

2018ನೇ ಸಾಲಿನ 90ನೇ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದರ ನಿರ್ದೇಶಕರು ಗಿಲ್ಲೆರ್ಮೊ ಡೆಲ್ ಟೊರೊ ಈ ಸಾಲಿನ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಜೆ. ಮಿಲ್ಸ್ ಡೇಲ್ ಆಗಿದ್ದಾರೆ. ಅತ್ಯುತ್ತಮ ಚಿತ್ರ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಶೇಪ್ ಆಫ್ ವಾಟರ್ ಪ್ರಶಸ್ತಿ ಗಳಿಸಿಕೊಂಡಿದೆ.  ಪ್ರಶಸ್ತಿ ಪ್ರದಾನ ಸಮಾರಂಭ ಕಳೆದ ರಾತ್ರಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ನಡೆಯಿತು.

ತ್ರಿ ಬಿಲ್ ಬೋರ್ಡ್ಸ್ ಔಟ್ ಸೈಡ್ ಎಬ್ಬಿಂಗ್, ಮಿಸ್ಸೌರಿ ಸಿನಿಮಾದ ನಾಯಕಿ ಫ್ರಾನ್ಸೆಸ್ ಮೆಕ್ಡೋರ್ಮಂಡ್ ಈ ವರ್ಷದ ಅತ್ಯುತ್ತಮ ನಟಿಯಾಗಿ ಮತ್ತು ಡಾರ್ಕೆಸ್ಟ್ ಅವರ್ ಚಿತ್ರದ ನಟನೆಗೆ ಗ್ಯಾರಿ ಓಲ್ಡ್ಮನ್ ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದಾರೆ. ಶೀತಲ ಯುದ್ಧದ ಫ್ಯಾಂಟಸಿ ಚಿತ್ರವಾಗಿರುವ ದ ಶೇಪ್ ಆಫ್ ವಾಟರ್ ನಲ್ಲಿ ಸ್ಯಾಲ್ಲಿ ಹಾಕಿನ್ಸ್ ಮೂಕ ದ್ವಾರಪಾಲಕಳಾಗಿ ನಟಿಸಿದ್ದು ಈಕೆ ಸರ್ಕಾರಿ ಪ್ರಯೋಗಾಲಯದಿಂದ ವಶಪಡಿಸಿಕೊಂಡ ಜನಚರ ಪ್ರಾಣಿ ಜೊತೆ ಪ್ರೀತಿಯಲ್ಲಿ ಬೀಳುತ್ತಾಳೆ.

ಜೋರ್ದನ್ ಪೀಲ್ಸ್ ಅವರ ಗೆಟ್ ಔಟ್ ಅತ್ಯುತ್ತಮ ಚಿತ್ರಕಥೆ, ಜೇಮ್ಸ್ ಐವರಿಯವರ ಕಾಲ್ ಮಿ ಬೈ ಯುವರ್ ನೇಮ್ ಚಿತ್ರ ಅತ್ಯುತ್ತಮ ಅಳವಡಿಸಿದ ಚಿತ್ರಕಥೆ ಪ್ರಶಸ್ತಿ ಗಳಿಸಿಕೊಂಡಿದೆ. ಅತ್ಯುತ್ತಮ ಒರಿಜಿನಲ್ ಸ್ಕೋರ್ ಕೂಡ ಶೇಪ್ ಆಫ್ ವಾಟರ್ ಗೆ ಹೋಗಿದ್ದು ಬ್ಲೇಡ್ ರನ್ನರ್ 2049 ಚಿತ್ರದ ಛಾಯಾಗ್ರಹಣಕ್ಕೆ ರೋಜರ್ ಡೀಕಿನ್ಸ್ ಅವರಿಗೆ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ವಿಷುವಲ್ ಎಫೆಕ್ಟ್ ಚಿತ್ರ ಬ್ಲೇಡ್ ರನ್ನರ್ 2049, ಅತ್ಯುತ್ತಮ ಸಿನಿಮಾ ಸಂಕಲನ ಡಂಕಿರ್ಕ್, ಅತ್ಯುತ್ತಮ ಆನಿಮೇಷನ್ ಚಿತ್ರ ಡಿಯರ್ ಬಾಸ್ಕೆಟ್ ಬಾಲ್, ಅತ್ಯುತ್ತಮ ಆನಿಮೇಷನ್ ಫ್ಯೂಚರ್ ಚಿತ್ರ ಡಿಸ್ನಿ-ಪಿಕ್ಸರ್ ಅವರ ಕೊಕೊ ಚಿತ್ರಕ್ಕೆ ಲಭಿಸಿದೆ.

ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿ ಎ ಫೆಂಟಾಸ್ಟಿಕ್ ವುಮನ್ ಗೆ ಲಭಿಸಿದೆ. ಚಿಲಿ ದೇಶದ ಚಿತ್ರವು ಮಂಗಳಮುಖಿ ಗಾಯಕನ ಹೋರಾಟದ ಬಗ್ಗೆ ಕೇಂದ್ರೀಕರಿಸುತ್ತದೆ. ಅತ್ಯುತ್ತಮ ಧ್ವನಿ ಮಿಶ್ರಣ ಮತ್ತು ಅತ್ಯುತ್ತಮ ಸಂಕಲನ ಡಂಕಿರ್ಕ್ ಚಿತ್ರಕ್ಕೆ ಸಂದಿದೆ.

Image result for shape of water

Leave a Reply