ದೇವರ ಯೋಜನೆ ಎಂದು ಮೂರು ಮಕ್ಕಳ ತಾಯಿಯಾದ ಸನ್ನಿ

ಸನ್ನಿ ಲಿಯೋನ್ ಸೋಮವಾರ ಬೆಳಗ್ಗೆ ತನ್ನ ಅಭಿಮಾನಿಗಳೊಂದಿಗೆ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು ಸನ್ನಿ ಲಿಯೋನ್ ಹಾಗೂ ಆಕೆಯ ಪತಿ ಎರಡು ಮುದ್ದಾದ ಗಂಡು ಮಕ್ಕಳನ್ನು ದತ್ತು ಪಡೆದಿದ್ದಾರೆ.

ಈ ಹಿಂದೆ ಕಳೆದ ವರ್ಷ ಜೂನ್ ನಲ್ಲಿ ನಿಶಾ ಕೌರ್ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದ ಇವರು ಈಗ ಅಶರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಎಂಬ ಎರಡು ಮಕ್ಕಳನ್ನು ಹಿಡಿದು ಕುಳಿತುವ ಫೋಟೋವನ್ನು ಸನ್ನಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಬಾಡಿಗೆ ತಾಯಿಯ ಮೂಲಕ ಈ ಮಕ್ಕಳನ್ನು ಪಡೆದಿರುವುದಾಗಿ ಸನ್ನಿ ಸ್ಪಷ್ಟ ಪಡಿಸಿದ್ದಾರೆ.

ಸನ್ನಿ ಇದು ‘ದೇವರ ಯೋಜನೆ’ ಎಂದು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳ ನಂತರ, ನಮ್ಮ ಕುಟುಂಬ ಈಗ ಆಶರ್ ಸಿಂಗ್ ವೆಬರ್, ನೋವಾ ಸಿಂಗ್ ವೆಬರ್ ಮತ್ತು ನಿಶಾ ಕೌರ್ ವೆಬರ್ ಅವರೊಂದಿಗೆ ಪೂರ್ಣಗೊಂಡಿದೆ ಎಂದಿದ್ದಾರೆ.

Sunny Leone and Daniel Weber show off their big happy family in new photo.

Leave a Reply