ಬೆಂಗಳೂರು ವಿಶ್ವವಿದ್ಯಾಲಯದ ಮತ್ತೊಂದು ಹಗರಣ..

ಬೆಂಗಳೂರು: ವಿವಿ ಈಗ ಮತ್ತೊಂದು ವಿವಾದಾತ್ಮಕ ಹೆಜ್ಜೆ ಇಡಲು ಮುಂದಾಗಿದೆ. ಸರ್ಕಾರದ ಅನುಮತಿ ಪಡೆಯದೇ ಸ್ಕಿಲ್ ಡೆವಲಂಪ್ಮೆಂಟ್ ಹೆಸರಲ್ಲಿ ಪದವಿ ವಿದ್ಯಾರ್ಥಿಗಳಿಗೆ sap ಕೋರ್ಸ್ ಜಾರಿಗೆ ವಿವಿ ಮುಂದಾಗಿದೆ. ವಿವಿಯ 3 ಲಕ್ಷ ವಿದ್ಯಾರ್ಥಿಗಳಿಂದ ತಲಾ 7 ಸಾವಿರ ರೂನಂತೆ 21 ಕೋಟಿ ರೂ ಹಣ ವಸೂಲಿ್ಗೆ ಸಿದ್ಧತೆ ನಡೆದಿದೆ. ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರು ವಿವಿಯ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಂಜ್ ಮೆಂಟ್ ನ ವಿದ್ಯಾರ್ಥಿಗಳಿಗೆ SAP ಪ್ರೋಗ್ರಾಂನ್ನ ಜಾರಿಗೆ ತರಲಾಗಿತ್ತು.ಆದ್ರೆ ಈ ಯೋಜನೆಯಲ್ಲಿ ಸುಮಾರು ಎರಡೂವರೆ ಕೋಟಿಯಷ್ಟು ಅವ್ಯವಹಾರ ನಡೆದಿದೆ ಅಂತ ವಿಶ್ವವಿದ್ಯಾಲಯವೇ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಅದರ ತನಿಖೆ ಕೂಡಾ ನಡೆಯುತ್ತಿರುವ ಬೆನ್ನಲ್ಲೇ ಈಗ ವಿವಿ ಈ ನಡೆ ಹಲವು ಅನುಮಾನ ಮಾಡಿಸಿದೆ. ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಸಿಂಡಿಕೇಟ್ ಸದಸ್ಯರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಅವಶ್ಯಕತೆ ಇಲ್ಲದೆ ಇದ್ರೂ ಸ್ಯಾಪ್ ಪ್ರೋಗ್ರಾಂ ಜಾರಿಗೆ ತಂದು ಕೋಟ್ಯಂತರ ರೂಪಾಯಿ ಹಣ ಹೊಡೆಯಲು ವಿವಿಯ ಸಿಂಡಿಕೇಟ್ ಸದಸ್ಯರು ಹಾಗೂ ರಿಜಿಸ್ಟ್ರಾರ್ ಗಳು ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

Leave a Reply