ಬಿ ಬಿ ಎಂ ಪಿ ಅಲ್ಲಿ ಕಾಂಗ್ರೆಸ್ ಮತ್ತು ಜೆ ಡಿ ಎಸ್ ಮೈತ್ರಿ ಏನಾಗಲಿದೆ??.

ಜೆಡಿಎಸ್ ವರಿಷ್ಠ ದೇವೇಗೌಡ ಸಿಡಿಸಿದ್ದ ಬಾಂಬ್ ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವ ಲೆಕ್ಕಾಚಾರ ಬಿಬಿಎಂಪಿ ಅಂಗಳದಲ್ಲಿ ನಡೆ ಯುತ್ತಿದೆ.ಆದ್ರೆ ನಗರ ಪೌರಸಂಸ್ಥೆಗಳ ಬೈಬಲ್ ಎಂದೇ ಕರೆಸಿಕೊಳ್ಳುವ ಕೆಎಂಸಿ ಆಕ್ಟ್ ಪ್ರಕಾರ ಮೈತ್ರಿಯಿಂದ ಹೊರಬಂದ್ರೂ ಕಾಂಗ್ರೆಸ್ ಗಾಗ್ಲಿ..ಮೇಯರ್ ಸಂಪತ್ ರಾಜ್ ಅವರಿಗಾಗ್ಲಿ ಯಾವುದೇ ಸಮಸ್ಯೆ ತಲೆದೋರೊಲ್ಲ.ಏಕೆಂದ್ರೆ ಕೆಎಂಸಿ ಆಕ್ಟ್ 1976 ಪ್ರಕಾರ ಬಿಬಿಎಂಪಿ ಅಧಿಕಾರದ ವಿಚಾರದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸ್ತಾಪವೇ ಎದುರಾಗೊಲ್ಲವಂತೆ.

ಕರ್ನಾಟಕ ನಗರ ಪೌರ ಸಂಸ್ಥೆಗಳ ಆಕ್ಟ್ 1976 ಹಾಗೂ ಕರ್ನಾಟಕ ನಗರ ಪೌರಸಂಸ್ಥೆಗಳ ಚುನಾವಣಾ ನಿಯಮ 1979 ರ ಸೆಕ್ಷನ್ 71 ಹಾಗು 72ರ ಅನ್ವಯ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ .ಅವಿಶ್ವಾಸ ನಿರ್ಣಯ ಮಂಡನೆಗೇನೆ ಅವಕಾಶ ಇಲ್ಲ ಎಂದು ಆಕ್ಟ್ ಹೇಳುವಾಗ ಮೈತ್ರಿ ಕಡಿದುಕೊಳ್ಳುತ್ತೇವೆನ್ನುವ ಜೆಡಿಎಸ್ ವಾದ ದಲ್ಲಿ ಯಾವುದೆ ಹುರುಳಿಲ್ಲ ಎನ್ನುತ್ತಾರೆ ಕಾನೂನು ಪಂಡಿತರು.ಹಾಗಾಗಿ ಸೆಪ್ಟೆಂಬರ್ 28ರವರೆಗೂ ಸಂಪತ್ ರಾಜ್ ಮೇಯರ್ ಹುದ್ದೆಯಲ್ಲಿ ನಿರಾತಂಕವಾಗಿ ಮುಂದುವರೆಯಬಹುದಾಗಿದೆ.

ಇನ್ನು ಪಂಚಾಯತ್ ರಾಜ್ ವ್ಯವಸ್ಥೆ ಸೆಕ್ಷನ್ 49(2) ಪಂಚಾಯತ್ ರಾಜ್ ಕಾಯ್ದೆ ಹಾಗು ಕರ್ನಾಟಕ ಮುನ್ಸಿಪಲ್ ಆಕ್ಟ್ 1964 ರ ಪ್ರಕಾರ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಇದೆ ಎನ್ನಲಾಗುತ್ತಿದೆಯಾದ್ರೂ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್ ನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸ್ಲಿಕ್ಕೆ ಅವಕಾಶ ಇಲ್ಲ.ಹಾಗಾಗಿ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರೆಯಲು ಅವಕಾಶಗಳಿವೆ.

Leave a Reply