ರಶ್ಮಿಕಾ ಮಂದಣ್ಣರ 61 ವರ್ಷಗಳ ಹಿಂದಿನ ಸೀರೆಯ ಗುಟ್ಟು …

‘ಕಿರಿಕ್ ಪಾರ್ಟಿ’ ಹುಡುಗಿ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಬೆಂಗಳೂರು ಟೈಮ್ಸ್ ನ ‘ಮೋಸ್ಟ್ ಡಿಸೈರಬಲ್ ವುಮೆನ್’ ಪ್ರಶಸ್ತಿ ಪಡೆದುಕೊಂಡಿದ್ದರು. ಅದರ ಬೆನ್ನಲ್ಲೇ ಜೀ ಕನ್ನಡದ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ಕೂಡ ತೆಗೆದುಕೊಂಡರು. ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪಡೆಯಲು ಕಾರ್ಯಕ್ರಮಕ್ಕೆ ಹೋಗಿದ್ದ ರಶ್ಮಿಕಾ ಕೆಂಪು ಬಣ್ಣದ ಚೆಂದದ ಸೀರೆಯನ್ನ ಕೊಡವ ಶೈಲಿಯಲ್ಲಿ ತೊಟ್ಟು ಹೋಗಿದ್ದರು. ಇದು ನೋಡಗರ ಕಣ್ಣು ಕುಕ್ಕುತ್ತಿತ್ತು.

ಅವಾರ್ಡ್ ಕಾರ್ಯಕ್ರಮದಲ್ಲಿ ರಶ್ಮಿಕಾ ಧರಿಸಿದ್ದ ಸೀರೆಯ ಹಿಂದೆ ಒಂದು ಇತಿಹಾಸವಿದೆ. ಈ ಸೀರೆ ನಿನ್ನೆ ಮೊನ್ನೆ ಕೊಂಡುಕೊಂಡಿರುವುದಲ್ಲ. ಇದು ಸುಮಾರು 61 ವರ್ಷಗಳ ಹಳೆಯ ಸೀರೆ. ರಶ್ಮಿಕಾ ಮಂದಣ್ಣ ಧರಿಸಿದ್ದ ಕೆಂಪು ಬಣ್ಣದ ಸೀರೆ ಅವರ ಅಜ್ಜಿಯದ್ದು. ಅವರ ಅಜ್ಜಿ ನಂತರ ಅಮ್ಮನಿಗೆ ಕೊಟ್ಟಿದ್ದರು. ಈಗ ಅವರ ಅಮ್ಮ ಮಗಳಿಗೆ ಕೊಟ್ಟಿದ್ದಾರೆ. ಈ ವಿಷ್ಯವನ್ನ ಸ್ವತಃ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಿಳಿಸಿದ್ದಾರೆ.

”ನಾನು ಬೆಳೆದದ್ದು ಅಜ್ಜಿ ಬಳಿಯೇ. ನಾನು ಜೀವನದಲ್ಲಿ ‘ಏನೋ ಒಂದು ಆಗುವೆ’ ಎಂದು ಅಜ್ಜಿ ಯಾವಾಗಲೂ ಹೇಳುತ್ತಿದ್ದರು. ಅವರು ನಮ್ಮನ್ನು ಬಿಟ್ಟು ಹೋದಾಗ ನನಗೆ ಕೋಪ ಬಂದಿತ್ತು. ನಾವರನ್ನು ತುಂಬಾ ಮಿಸ್‌ ಮಾಡುತ್ತಿರುವೆ. ಈಗ ಅಜ್ಜಿ ನನ್ನ ನೋಡಿ ಹೆಮ್ಮೆ ಪಡುತ್ತಿರಬಹುದು. ಆಕೆಯ ಸೀರೆ ಧರಿಸಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯಾಗಿದೆ. ನನಗೆ ಸಿಕ್ಕಿರುವುದು ನನ್ನ ಮುಂದಿನ ಪೀಳಿಗೆಗೂ ಹೋಗಬೇಕಾಗಿದೆ, ಆದ್ದರಿಂದ ಇದರ ಬಗ್ಗೆ ನನಗೆ ತುಂಬಾ ಸೆಂಟಿಮೆಂಟ್” ಎಂದು ತಮ್ಮ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದು ಸುಮಾರು 61 ವರ್ಷಗಳ ಹಿಂದಿನ ಸೀರೆ.

Image result for rashmika mandanna in kodava saree

Leave a Reply