ಪತ್ರಕರ್ತೆ ಗೌರಿ‌ ಲಂಕೇಶ್ ಹತ್ಯೆ ಮರುಸೃಷ್ಟಿ ನೆಡಸಿದ ಎಸ್ ಐ ಟಿ.

ಬೆಂಗಳೂರು :ಪತ್ರಕರ್ತೆ ಗೌರಿ‌ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಶಂಕಿತ ಆರೋಪಿ ಹೊಟ್ಟೆ ಮಂಜುನನ್ನು ಎಸ್ಐಟಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಹೊಟ್ಟೆ ಮಂಜುನನ್ನು ಗೌರಿ‌ ಮನೆಯ ಬಳಿ‌ಗೆ ಕರೆದೊಯ್ದು ತಲೆಗೆ ಹೆಲ್ಮೇಟ್ ಹಾಕಿ ಪೊಲೀಸರು ಮರುಸೃಷ್ಟಿ ನಡೆಸಿದ್ದಾರೆ. ಹೊಟ್ಟೆ‌ಮಂಜ ಅಲಿಯಾಸ್ ನವೀನ್ ಕುಮಾರ್ ಕೈಗೆ ಗನ್ ಕೊಟ್ಟು ಶೂಟ್ ಮಾಡುವಂತೆ ಮರು ಸೃಷ್ಟಿ ನಡೆಸಿ ಗೌರಿ ಹತ್ಯೆ‌ ನಡೆದಿರುವ ಬಗ್ಗೆ ಸಾಮ್ಯತೆ ಪರಿಶೀಲಿಸುತ್ತಿದ್ದಾರೆ. ವಿಚಾರಣೆ ವೇಳೆ ತಾನು ಮೈಸೂರಿನಲ್ಲಿ ಮೂವರಿಗೆ ಬಂದೂಕು ಕೊಟ್ಟಿರುವುದಾಗಿ ಕೂಡ ಮಂಜ‌ ಹೇಳಿಕೆ ನೀಡಿದ್ದಾನೆ. ಸಿಸಿ ಕ್ಯಾಮರಾದ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಮರುಸ್ರಷ್ಟಿ ಮಾಡಿದ್ದಾರೆ. ಆದ್ರೆ ನವೀನ್ ಮುಖ‌ ಚಹರೆಗೂ ಸಿಸಿ ಕ್ಯಾಮರಾದಲ್ಲಿದ್ದ ಪೋಟೋಗೂ ತಾಳೆ ಕಂಡು ಬಂದಿಲ್ಲ. ಮಂಗಳೂರು, ಮೈಸೂರು ಹಾಗೂ ಉತ್ತರ ಪ್ರದೇಶದಲ್ಲಿ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸುದ್ದಿ ಸಮಾಚಾರಕ್ಕೆ ಪೊಲೀಸ್ ಉನ್ನತ ಮೂಲಗಳ‌ ಮಾಹಿತಿ

Leave a Reply