ಶಿವಾಜಿನಗರದ ಬಸ್ ಟರ್ಮಿನಲ್ನಿಂದ ಬಾಣಸವಾಡಿ ರೈಲು ನಿಲ್ದಾಣಕ್ಕೆ ಸೋಮವಾರದಿಂದ ಮಿನಿ ಬುಸ್ ಸೌಲಭ್ಯ ಆರಂಭಿಸಲಾಗಿದೆ. ಬೆಂಗಳೂರು ಪೂರ್ವದಲ್ಲಿರುವ ಬಾಣಸವಾಡಿ ರೈಲ್ವೆ ನಿಲ್ದಾಣ ಬಳಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮಿನಿ ಬಸ್ ಸೌಕರ್ಯ ಕಲ್ಪಿಸಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ 300-E ಮಾರ್ಗದ ಬಸ್ ಗೆ ಚಾಲನೆ ನೀಡಿದ್ದಾರೆ.
ಮಿನಿ ಬಸ್ ಬಾಣಸವಾಡಿಯಿಂದ ಬೆಳಗಿನ ಜಾವ 4 ಗಂಟೆಗೆ ಹೊರಡಲಿದ್ದು, ಎರಡು ಗಂಟೆಗಳಿಗೊಂದು ಬಸ್ ನಂತೆ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಸಂಚಾರ ಪ್ರಮಾಣ ಹೆಚ್ಚಸಿಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ನೈಋತ್ಯ ರೈಲ್ವೆ ವಲಯ ಎರ್ನಾಕುಲಂ ನಿಂದ ಬರುವ ಎರಡು ರೈಲುಗಳ ನಿಲುಗಡೆ ಸ್ಥಳವನ್ನು ಬಾಣಸವಾಡಿ ನಿಲ್ದಾಣಕ್ಕೆ ಸ್ಥಳಾಂತರ ಮಾಡಿದ್ದರಿಂದ ಪ್ರಯಾಣಿಕರಿಗೆ ಸ್ಥಳೀಯವಾಗಿ ಸಂಚಾರಕ್ಕೆ ಅನಾನುಕೂಲ ಉಂಟಾಗಿದ್ದರಿಂದ ಮಿನಿ ಬಸ್ ಸೌಲಭ್ಯ ಒದಗಿಸಲಾಗಿದೆ.