ಕೊನೆಗೂ ಪತ್ತೆಯಾದ ಸುನಾಮಿ ಕಿಟ್ಟಿ ಇಂದ ಹಲ್ಲೆಗೆ ಒಳಗಾದ ತೌಶಿತ್ ಗೌಡ

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಸುನಾಮಿ ಕಿಟ್ಟಿಯಿಂದ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣ ಸಂಬಂಧ ಹಲ್ಲೆಗೊಳಗಾದ ತೌಶಿತ್ ಗೌಡನನ್ನು ಪೊಲೀಸರು ಪತ್ತೆ ಹಚ್ಷಿದ್ದಾರೆ. ನಿನ್ನೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾದ ವೇಳೆ ತೌಶಿತ್ ಗೌಡ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ದೀಪಾಶ್ರೀ ಆಸ್ಪತ್ರೆಗೆ ತೌಶಿತ್ ಗೌಡ ಚಿಕಿತ್ಸೆಗಾಗಿ ದಾಖಲಾಗಿದ್ದರು. ಸುನಾಮಿ‌ ಕಿಟ್ಟಿ‌ ಬಂಧನ ನಂತರ ಹಲ್ಲೆಗೊಳಗಾಗಿದ್ದ ತೌಶಿತ್‌ಸುನಾಮಿ ಕಿಟ್ಟಿ ಹಾಗೂ ಸಹಚರರಿಗೆ ಹೆದರಿ ತೌಶಿತ್ ತನ್ನ ಸ್ನೇಹಿತರ ರೂಂನಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಸದ್ಯ ಮಾತನಾಡಲು ಆಗದ ಸ್ಥಿತಿಯಲ್ಲಿರುವ ತೌಶಿತ್‌ಗೆ ವೈದ್ಯರು ಚಿಕಿತ್ಸೆ ‌ಆರಂಭಿಸಿದ್ದಾರೆ.

ತೌಶಿತ್ ದೇಹದ ಮೇಲೆ ೧೫ ರಿಂದ ೨೦ ಭಾಗಗಳಲ್ಲಿ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಜ್ಞಾನಭಾರತಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply