ರೋಗಿಗಳಿಗೆ ಸಿಹಿ ಸುದ್ಧಿ – ಅಗ್ಗವಾಗಲಿರುವ ಹೆಚ್ಚುವರಿ ಈ 12 ಔಷಧಿಗಳು

ಔಷಧಿಗಳ ಮೇಲೆ ಶೇಕಡಾ 10 ರಷ್ಟು ಹೆಚ್ಚುವರಿ ಲಾಭ ಗಳಿಕೆ ಮೇಲೆ ನಿಷೇಧ ಹೇರಿದ ನಂತ್ರ ಕೆಲ ಔಷಧಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕಿಡ್ನಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ನೀಡಲಾಗುವ ಔಷಧಿ ಬೆಲೆ ಅಗ್ಗವಾಗಿದೆ. ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ 12 ಔಷಧಿಗಳ ಬೆಲೆ ಇಳಿಕೆಗೆ ತೀರ್ಮಾನ ಕೈಗೊಂಡಿದೆ.

ಹೊಸ ಆದೇಶದ ಪ್ರಕಾರ ಔಷಧಿ ಬೆಲೆಯಲ್ಲಿ ಶೇಕಡಾ 54ರಷ್ಟು ಇಳಿಕೆಯಾಗಲಿದೆ. ರಾಷ್ಟ್ರೀಯ ಔಷಧಿ ಪ್ರಾಧಿಕಾರ 9 ಔಷಧಿಗಳ ಗರಿಷ್ಠ ಬೆಲೆಯನ್ನು ನಿಗದಿಪಡಿಸಿದೆ. ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ ಕಳೆದ ಒಂದು ವರ್ಷದಲ್ಲಿ ಸುಮಾರು 1100 ವಿವಿಧ ಔಷಧಿಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. ಇದ್ರಿಂದಾಗಿ ದೇಶದ ಕೋಟ್ಯಾಂತರ ರೋಗಿಗಳಿಗೆ ಔಷಧಿ ಖರೀದಿ ಸುಲಭವಾಗಿದೆ. ಶೀಘ್ರದಲ್ಲಿಯೇ ಮತ್ತೆ 12 ಔಷಧಿಗಳ ಬೆಲೆ ಇಳಿಯಲಿದೆ ಎಂದು ಮೂಲಗಳು ಹೇಳಿವೆ.

ಹೃದಯ ರಕ್ತನಾಳ ಸಂಬಂಧಿ ಕಾಯಿಲೆಗೆ ನೀಡುವ ಔಷಧಿ, ಕಿಡ್ನಿ ಸೋಂಕು, ಹಾವು ಕಡಿತಕ್ಕೆ ನೀಡುವ ಔಷಧಿ ಸೇರಿದಂತೆ 12 ಔಷಧಿಗಳ ಬೆಲೆ ಇಳಿಯಲಿದೆ. ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರದ ಆದೇಶದ ಪ್ರಕಾರ, 9 ವಿವಿಧ ಔಷಧಿಯ ಚಿಲ್ಲರೆ ಬೆಲೆಯಲ್ಲಿ ಕಡಿತವಾಗಲಿದೆ.

Related image

Leave a Reply