ಎ. ಮಂಜು ವಿರುದ್ಧ ಹೆಚ್ ಡಿ ರೇವಣ್ಣ ಮರಳು ದಂಧೆ ಆರೋಪ.

ಹಾಸನ: ಹಾಸನದಲ್ಲಿ ಮಾಜಿ ಸಚಿವ ಹೆಚ್,ಡಿ,ರೇವಣ್ಣ ಹೇಳಿಕೆ,
ಹಾಸನ ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೀತಿದೆ ಎಂದು ಆರೋಪ.

ಎಲ್ಲಾ ಇಲಾಖೆಗಳಿಗೆ ಮಾಮೂಲಿ ತಪ್ಪದೇ ಹೋಗುತ್ತಿದೆ. ಅಧಿಕಾರಿಗಳನ್ನ ಕೇಳಿದ್ರೆ ಉಸ್ತುವಾರಿ ಸಚಿವರಿಗೆ ತಲುಪಿಸಬೇಕು ಅಂತಾರೆ, ಒಂದೊಂದು ಲಾರಿಯಿಂದ ಕನಿಷ್ಠ ಒಂದು ಲಕ್ಷ ರೂ.ವಸೂಲಿ,
ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಹೆಚ್.ಡಿ ರೇವಣ್ಣ ಆರೋಪ. ಕೋಟ್ಯಾಂತರ ರೂಪಾಯಿ ಹಣವನ್ನ ಸಚಿವರು ವಸೂಲಿ ಮಾಡ್ತಿದ್ದಾರೆ. ಎಲ್ಲಾ ಗೊತ್ತಿದ್ದು ಪೊಲೀಸ್ ಇಲಾಖೆಯೂ ಕಣ್ಮುಚ್ಚಿ ಕುಳಿತಿದೆ.

ಹಾಸನ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ದಿನಕ್ಕೆ 50 ರಿಂದ 100 ಲೋಡ್ ಲಾರಿ ಪರವಾನಗಿ ಇಲ್ಲದೇ ಮರಳು ಸಾಗಿಸುತ್ತಿವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಆರ್ ಟಿ ಓ ಕಚೇರಿಗೆ ತಿಂಗಳಿಂದ 50 ಲಕ್ಷದಿಂದ 1 ಕೋಟಿಯಷ್ಟು ಹಣ ಸಂದಾಯವಾಗುತ್ತಿದೆ. ಮರಳು ಸಾಗಣೆ ವಾಹನದಿಂದ ಒಬ್ಬೊಬ್ಬ ಬ್ರೇಕ್ ಇನ್ಸ್ ಪೆಕ್ಟರ್ ಗೆ ಕೋಟಿ ಕೋಟಿ ವರಮಾನ ಬರುತ್ತಿದೆ. ಸಂಬಂಧಪಟ್ಟ ಮಂತ್ರಿಗೆ ತಿಂಗಳಿಗೆ 50 ರಿಂದ 100 ಕೋಟಿ ಮಾಮೂಲಿ ಕೊಡಬೇಕು ಅಂತ ಇನ್ಸ್ಪೆಕ್ಟರ್ ಗಳೇ ಹೇಳುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಸೀನಿಯರ್ಸ್ ಬ್ರೇಕಿಂಗ್ ಇನ್ಸ್ ಪೆಕ್ಟರ್ 500 ಕೋಟಿಯಷ್ಟು ಆಸ್ತಿ ಮಾಡಿದ್ದಾರೆ. ಹೀಗಿದ್ದರೂ ಲೋಕಾಯುಕ್ತವಾಗಲೀ, ಎಸಿಬಿಯಾಗಲೀ ದಾಳಿ ಮಾಡಿಲ್ಲ. ಮಾಡುವುದೂ ಇಲ್ಲ. ಏಕೆಂದ್ರೆ ಈ ಎರಡೂ ಸಂಸ್ಥೆಗಳೂ ಸತ್ತು ಹೋಗಿವೆ ಎಂದರು.ರಾಜ್ಯದಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ.

ಇದೆಲ್ಲವನ್ನು ನೋಡಿದ್ರೆ ಕಮೀಷನ್ ಸರಕಾರ ಎಂದು ಪ್ರಧಾನಿ ಮಾಡಿರುವ ಆರೋಪ ನಿಜ ಎನಿಸುತ್ತಿದೆ.

ಇದೇ ವೇಳೆ ಕಾಂಗ್ರೆಸ್ ಗೆ ಅಶೋಕ್ ಖೇಣಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆ ಖೇಣಿ ಮನೆಬಾಗಿಲಿಗೆ ಹೋಗೋ ಪರಿಸ್ಥಿತಿ ಬಂತಲ್ಲಾ ಎಂದು ಲೇವಡಿ ಮಾಡಿದರು. ಅದಕ್ಕೇ ಮಹಾತ್ಮಗಾಂಧಿ ಅವರು ಮುಂದೊಂದು ದಿನ ಕಾಂಗ್ರೆಸ್ ಗೆ ಕಳ್ಳ-ಕಾಕರು ಸೇರುತ್ತಾರೆ ಎಂದು ವ್ಯಂಗ್ಯವಾಡಿದರು.

ಈ ಬಗ್ಗೆ ಡಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು -ಹೆಚ್.ಡಿ ರೇವಣ್ಣ ಆಗ್ರಹಿಸಿದರು.

Leave a Reply