ಸಿ.ಎಂ ಸಿದ್ದರಾಮಯ್ಯ ಆದೇಶದಂತೆ ಜಯಲಲಿತಾ ಆಪ್ತೆ ಶಶಿಕಲಾಗೆ ರಾಜಾತಿಥ್ಯ?

ಬೆಂಗಳೂರು :ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ಜಯಲಲಿತಾ ಆಪ್ತೆ ಶಶಿಕಲಾಗೆ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ಸದ್ಯ ಸಿಎಂ ಸಿದ್ದರಾಮಯ್ಯ ಹೆಸರು ಪ್ರಸ್ತಾಪವಾಗಿದೆ. ಶಶಿಕಲಾಗೆ ರಾಜಾತಿಥ್ಯ ನೀಡಿರುವ ಬಗ್ಗೆ ಸತ್ಯನಾರಾಯಣ ರಾವ್ ತಪ್ಪೋಪ್ಪಿಕೊಂಡಿದ್ದು ಸಿಎಂ ಸಿದ್ದರಾಮಯ್ಯ ಆಣತಿಯಂತೆ ವಿಶೇಷ ಸೌಲಭ್ಯ ನೀಡಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

ಖುದ್ದು ಸಿಎಂ ಸಿದ್ದರಾಮಯ್ಯ ಪಿಎ ವೆಂಕಟೇಶ್ ಮೂಲಕ ತಮ್ಮ ಕುಮಾರಕ್ರ‌‌ಪ ಗೆಸ್ಟ್ ಹೌಸ್ ಗೆ ಕರೆಸಿಕೊಂಡು ನನಗೆ ಸೂಚನೆ ನೀಡಿದ್ದರು ಅವರ ಸೂಚನೆಯಂತೆ ಶಶಿಕಲಾಗೆ ಮಂಚ, ಹಾಸಿಗೆ ಹಾಗೂ ದಿಂಬು ನೀಡಿದ್ದೇನೆ. ಈ ಸೌಲಭ್ಯ ನೀಡಲು ನಾನು ಯಾವುದೇ ರೀತಿಯ ಲಂಚ ತೆಗೆದುಕೊಂಡಿಲ್ಲ ಸಿಎಂ ಆದೇಶ ಪಾಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ವಿಶೇಷ ಸವಲತ್ತು ನೀಡಿದ ಪ್ರಕರಣದ ತನಿಖೆಯನ್ನು‌ ಎಸಿಬಿ ನಡೆಸುತ್ತಿದ್ದು ಇದರ ರದ್ದತಿಗೆ ನಿವೃತ್ತ ಡಿಜಿಪಿ ಎಚ್.ಎನ್.ಸತ್ಯನಾರಾಯಣರಾವ್ ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದು ಅರ್ಜಿಯಲ್ಲಿ ಸಿಎಂ ಸೂಚನೆಯಂತೆ ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಿರುವ ಬಗ್ಗೆ ತಿಳಿಸಿದ್ದಾರೆ.

Leave a Reply