ಮಾರ್ಚ್ 8ರಿಂದ ಅಮೆರಿಕದಲ್ಲಿ ಬಿಡುಗಡೆಯಾಗಲಿರುವ ‘ಟಗರು’

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದ್ದು ಎಲ್ಲಾ ಥಿಯೇಟರ್ ಗಳ ಮುಂದೆ ಹೌಸ್ ಪುಲ್ ಬೋರ್ಡ್ ಗಳು ರಾರಾಜಿಸುತ್ತಿವೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರ ರಾಜ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಶಿವರಾಜ್ ಕುಮಾರ್ ಸೇರಿದಂತೆ ಚಿತ್ರದಲ್ಲಿ ಧನಂಜಯ್, ವಶಿಷ್ಠ ಸಿಂಹಾ, ಭಾವನ, ಮಾನ್ವಿತಾ ಹರೀಶ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು ಟಗರು ಹಾಡುಗಳು ಸಖತ್ ಹಿಟ್ ಆಗಿವೆ. ಈ ಮಧ್ಯೆ ಟಗರು ಚಿತ್ರ ಅಮೆರಿಕದಲ್ಲಿ ಮಾರ್ಚ್ 8ರಿಂದ ಬಿಡುಗಡೆಯಾಗಲಿದೆ.

ಟಗರು ಚಿತ್ರದ ಓಟ ಮುಂದಿನ ಕೆಲ ವಾರಗಳಲ್ಲಿ ಹೀಗೆ ಇದ್ದರೆ ಚಿತ್ರ 50 ಕೋಟಿ ರುಪಾಯಿ ಗಳಿಕೆ ಮಾಡಲಿದೆ ಎಂದು ಚಿತ್ರದ ನಿರ್ಮಾಪಕ ಶ್ರೀಕಾಂತ್ ಹೇಳಿದ್ದಾರೆ. ಇನ್ನು ಅಮೆರಿಕದ 25 ನಗರಗಳಲ್ಲಿ ಮಾರ್ಚ್ 8ರಿಂದ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.

Related image

Leave a Reply