ಯದುವಂಶದ ಮಹಾರಾಜರಿಗೆ ಹುಟ್ಟು ಹಬ್ಬದ ಸಂಭ್ರಮ

ಮೈಸೂರು: ಯದುವಂಶದ ಮಹಾರಾಜ ಯದುವೀರ್‌ ಒಡೆಯರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮೈಸೂರು ಅರಮನೆಯಲ್ಲಿ ಮಹಾರಾಜರ ವರ್ದಂತಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಅರಮನೆಯಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.

ಬೆಳಗ್ಗೆಯೇ ಎಣ್ಣೆ ಸ್ನಾನ ಮಾಡಿ
ಅರಮನೆಯ ಒಳ ಆವರಣದಲ್ಲಿ ವಿಶೇಷ ಹೋಮದಲ್ಲಿ ಯಧುವೀರ್ ಭಾಗಿಯಾಗಲಿದ್ದಾರೆ.
ನಂತರ ರಾಜಗುರು ಪರಕಾಲ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಿದ್ದಾರೆ.

26ನೇ ವಸಂತಕ್ಕೆ ಕಾಲಿಟ್ಟಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಪಂಚಾಂಗದ ಪ್ರಕಾರ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಜನ್ಮದಿನಾಂಕದ ಪ್ರಕಾರ ಮಾರ್ಚ್ 24ರಂದು ಯದುವೀರ್ ಹುಟ್ಟುಹಬ್ಬ.
ಕೇವಲ ಆಪ್ತರಿಗಷ್ಟೆ ಆಹ್ವಾನ ನೀಡಿ ಸರಳ ಕಾರ್ಯಕ್ರಮ ಆಯೋಜಿಸಲಾಗಿದೆ.

Leave a Reply