ನರೇಂದ್ರ ಮೋದಿಗೆ ಭಾರಿ ಮುಖಬಂಗ!!! ಪ್ರಾದೇಶಿಕತೆ ಎತ್ತಿ ಹಿಡಿದ ಚಂದ್ರಬಾಬು ನಾಯ್ಡು.

ರೊಚ್ಚಿಗೆದ್ದಿದ್ದ ತೆಲಗು ಯುವಜನರು.

ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್‍ನಲ್ಲಿ ಆಂಧ್ರಪ್ರದೇಶ, ತೆಲಂಗಾಣಕ್ಕೆ ಭಾರಿ ಮೋಸವಾದ ಹಿನ್ನಲೆಯಲ್ಲಿ, ಎರಡೂ ರಾಜ್ಯಗಳಲ್ಲಿ ಭಾರಿ ಆಕ್ರೋಶ ಭುಗಿಲೆದಿತ್ತು. ಆಂಧ್ರ ಮತ್ತು ತೆಲಂಗಾಣದ ಯುವಜನತೆ ಫೇಸ್‍ಬುಕ್ ಮತ್ತು ಟ್ವಿಟರ್‍ನಲ್ಲಿ ದಿಲ್ಲಿಯಲ್ಲಿ ಕೂತಿರುವ ಬಿ.ಜೆ.ಪಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು, ಬಿ.ಜೆ.ಪಿ ಪೇಜ್‍ಗಳಿಗೆ ಒಂದು ಸ್ಟಾರ್ ಕೊಟ್ಟು ಮಂಗಳಾರತಿ ಮಾಡಿದ್ದರು.

ಎನ್. ಡಿ.ಎ ಜೊತೆಗಿನ ಮೈತ್ರಿಗೆ ಬ್ರೇಕ್

ಈ ಹಿನ್ನಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿ.ಡಿ.ಪಿ, ಎನ್.ಡಿ.ಎ ಸರ್ಕಾರದೊಂದಿಗಿನ ಮೈತ್ರಿ ಮುರಿದುಕೊಂಡಿದ್ದಾರೆ, ಇದರಿಂದ ಎನ್.ಡಿ.ಎ ಸರ್ಕಾರ ತೀವ್ರ ಮುಜುಗರ ಅನುಭವಿಸುವಂತಾಗಿದೆ.

ರಾಜ್ಯ ಮೊದಲು,ರಾಜಕೀಯ ಆಮೇಲೆ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಚಂದ್ರಬಾಬು ನಾಯ್ಡು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. “ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದ ಏಕತೆಗಾಗಿ ದುಡಿದಿದ್ದೇನೆ. ನಾನು ನನ್ನ ಜನರ ಒಳಿತಿಗಾಗಿ ಅಧಿಕಾರದಲ್ಲಿದ್ದೇನೆ ಹೊರತು ಖುರ್ಚಿಗಾಗಿ ಅಲ್ಲ. ನಮ್ಮ ರಾಜ್ಯಕ್ಕೆ ಹೊಸ ಬದಲಾವಣೆ ತರಬಹುದು ಎಂದು ನಂಬಿ ಎನ್.ಡಿ.ಎ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವು ಅದು ಈಡೇರದ ಕಾರಣ ಮೈತ್ರಿಯನ್ನು ಮುರಿಯುತ್ತಿದ್ದೇವೆ. ನಮ್ಮ ಎಂ.ಪಿ.ಗಳಾದ ಅಶೋಕ್ ಗಜಪತಿರಾಜು ಮತ್ತು ವೈ.ಎಸ್. ಚೌದರಿ ಅವರಿಗೆ ರಾಜಿನಾಮೆ ಕೊಡಲು ಸೂಚಿಸಿದ್ದೇನೆ. ನರೇಂದ್ರ ಮೋದಿ ಇಂತಹ ನಂಬಿಕೆ ದ್ರೋಹಿ ಎಂದು ಗೊತ್ತಿರಲಿಲ್ಲ.”

ಒಂದು ಲಕ್ಷ ಕೋಟಿ ಬದಲು 3 ಲಕ್ಷ ಬಿಡುಗಡೆ.

ಒಂದು ಲಕ್ಷ ಕೋಟಿ ಬಿಡುಗಡೆ ಮಾಡುವ ಜಾಗದಲ್ಲಿ ಕೇವಲ ಮೂರು ಲಕ್ಷ ಬಿಡುಗಡೆ ಮಾಡಿದ್ದಾರೆ, ಇದು ಅವರ ಅಜ್ಞಾನ ಮತ್ತು ನಮ್ಮ ರಾಜ್ಯಗಳ ಮೇಲಿನ ಅಸಡ್ಡೆಯನ್ನು ತೊರಿಸುತ್ತದೆ. ಬಿ.ಜೆ.ಪಿ ಪಕ್ಷವನ್ನು ದಕ್ಷಿಣ ಭಾರತದಿಂದಲೇ ಕಿತ್ತೊಗಯಬೇಕು, ದಿಲ್ಲಿಯಲ್ಲಿ ಕೂತಿರುವ ಇವರಿಗೆ ನಮ್ಮ ಕೂಗು ಗೊತ್ತಾಗುವುದಿಲ್ಲ .ಎಂದು ಚಂದ್ರಬಾಬು ನಾಯ್ಡು ರವರು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕನ್ನಡಿಗರು ನಿರಾಭಿಮಾನಿಗಳಾ ???

ನಮ್ಮ ನರೆಯ ರಾಜ್ಯವಾದ ಆಂಧ್ರದಲ್ಲಿ ಈ ಮಟ್ಟದ ಸ್ವಾಭಿಮಾನವಿದೆ, ಇನ್ನು ತಮಿಳುನಾಡಿನವರಂತೂ ಹೊರಗಿನ ಪಕ್ಷಗಳನ್ನು ಬಾಗಿಲಿನಲ್ಲಿ ಬಿಡುತ್ತಾರೆ. ಇಂತಹ ವಾತವರಣದಲ್ಲಿ, 17 ಸಂಸದರನ್ನು ಬಿಜೆಪಿಗೆ ಕೊಟ್ಟ ನಮ್ಮ ಅಭಿಮಾನಶೂನ್ಯ ಕನ್ನಡಿಗರು ಹೇಗೆ ಪಾಠ ಕಲಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply