ಮದ್ಯ ಮಾರುಕಟ್ಟೆಗೆ ಬರಲಿದೆ ಕೋಕಾ ಕೋಲಾ

ಜಪಾನ್ ನಲ್ಲಿ ಕೋಕಾ ಕೋಲಾ ಕಂಪನಿಯ ಮದ್ಯ ಮಾರುಕಟ್ಟೆಗೆ ಬರಲಿದೆ. ಈ ಪಾನೀಯ ಜಪಾನ್ ನಲ್ಲಿ ಜನಪ್ರಿಯವಾಗಿರುವ ಚು-ಹಿ ಮಾದರಿಯಲ್ಲಿರಲಿದೆ. ಕೋಕಾ ಕೋಲಾ ಕಂಪನಿ ಇದೇ ಮೊದಲ ಬಾರಿಗೆ ಆಲ್ಕೋಹಾಲಿಕ್ ಪಾನೀಯವನ್ನು ಬಿಡುಗಡೆ ಮಾಡ್ತಿದೆ.

ಜಪಾನ್ ನ ಜನಪ್ರಿಯ ಕಂಪನಿಗಳ ಪಾನೀಯದಲ್ಲಿ ಶೇ.9 ರಷ್ಟು ಅಲ್ಕೋಹಾಲ್ ಇರುತ್ತದೆ. ಹಾಗಾಗಿ ಕೋಕಾ ಕೋಲಾ ಕೂಡ ತನ್ನ ಪಾನೀಯದಲ್ಲಿ ಅದೇ ಪ್ರಮಾಣದ ಅಲ್ಕೋಹಾಲ್ ಬಳಸುವ ಸಾಧ್ಯತೆ ಇದೆ. ಕೋಕಾ ಕೋಲಾದ ಮದ್ಯ ಗ್ರಾಹಕರಿಗೆ ವಿಶಿಷ್ಟ ಅನುಭವ ಕೊಡಲಿದೆ ಅನ್ನೋದು ಕಂಪನಿಯ ವಿಶ್ವಾಸ.

ಇದರಲ್ಲಿ ಅಲ್ಕೋಹಾಲ್, ಸ್ಪಾರ್ಕ್ಲಿಂಗ್ ವಾಟರ್, ಫ್ಲೇವರ್ ಹಾಗೂ ಸಾಂಪ್ರದಾಯಿಕ ಪಾನೀಯ ಶೊಚುವನ್ನು ಬಳಸಲಾಗುತ್ತದೆ. ದ್ರಾಕ್ಷಿ, ಸ್ಟ್ರಾಬೆರಿ, ಕಿವಿ ಮತ್ತು ವೈಟ್ ಪೀಚ್ ಫ್ಲೇವರ್ ಗಳಲ್ಲಿ ಚುಹಿ ಲಭ್ಯವಿದೆ. ಶೊಚು ಬದಲು ವೋಡ್ಕಾ ಕೂಡ ಬಳಸಬಹುದು.

Image result for coca cola

Leave a Reply