ಶೀತಲ ಸಮರದ ಬಗ್ಗೆ ಕಲಾವಿದರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದ್ರೆ ಅವರ ವರ್ತನೆಯಿಂದ ಯಾರ ಮೇಲೆ ಯಾರಿಗೆ ಮುನಿಸು ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಈಗ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ವರ್ತನೆ ಚರ್ಚೆಯ ವಿಷ್ಯವಾಗಿದೆ.
ದೀಪಿಕಾ ಪಡುಕೋಣೆ ಫಿಟ್ನೆಸ್ ತರಬೇತಿಗಾಗಿ ಯಾಸ್ಮಿನ್ ಕರಾಚಿವಾಲಾ ಫಿಟ್ನೆಸ್ ಜಿಮ್ ಗೆ ಹೋಗ್ತಿದ್ದಳು. ಜಿಮ್ ಮುಂದೆ ಕಾರೊಂದನ್ನು ನೋಡಿದ ದೀಪಿ, ಜಿಮ್ ಒಳಗೆ ಹೋಗದೆ ಕಾರ್ ಯು ಟರ್ನ್ ಮಾಡಿದ್ದಾಳೆ. ರಣವೀರ್ ಮಾಜಿ ಪ್ರೇಯಸಿಯರು ಎದುರು ಬದುರು ಬರಲು ಇಷ್ಟಪಡೋದಿಲ್ಲ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟಿ ಕತ್ರಿನಾ ಕೈಫ್ ಮಧ್ಯೆ ಮೊದಲಿಂದಲೂ ಶೀತಲ ಸಮರವಿದೆ.
ಜಿಮ್ ಮುಂದೆ ಕತ್ರಿನಾ ಕಾರು ನೋಡಿದ್ದಾಳೆ ದೀಪಿಕಾ. ಆಶ್ಚರ್ಯವೆಂದ್ರೆ ದೀಪಿಕಾಗೆ ಕತ್ರಿನಾ ಕಾರಿನ ನಂಬರ್ ಕೂಡ ನೆನಪಿದೆ. ಜಿಮ್ ಒಳಗೆ ಹೋಗಿ ಇಬ್ಬರು ಎದುರು ಬದರಾಗುವ ಬದಲು ವಾಪಸ್ ಮನೆಗೆ ಹೋಗಿದ್ದಾರೆ.