ಈಶ್ವರಪ್ಪ ಪೆದ್ದ ಅಂತೆ, ಸಿಎಂ ತಲೇಲಿ ಗೊಬ್ಬರ ಇದೆಯಂತೆ…

ಮಂಡ್ಯ :ಸಿಎಂ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ನಡುವೆ ಮಾತಿನ ಜಟಾಪಟಿ ಮುಂದುವರಿದಿದೆ. ಎಂದಿನಿಂತೆ ಮತ್ತೆ ಸಿಎಂ ಸಿದ್ದರಾಮಯ್ಯ ಈಶ್ವರಪ್ಪ ಬ್ರೈನ್ಗೂ ನಾಲಿಗೆಗೂ ಲಿಂಕ್ ಇಲ್ಲ ಅಂತಾ ಮಂಡ್ಯದಲ್ಲಿ ಜರಿದ್ರು, ಈಶ್ವರಪ್ಪ ಒಬ್ಬ ಪೆದ್ದ ಎಂದು ಗೇಲಿ ಮಾಡಿದ್ರು.

ಸಿಎಂ ಹೇಳಿಕೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಸಿದ್ದರಾಮಯ್ಯ ತಲೆಯಲ್ಲಿ ಗೊಬ್ಬರ ಇದೆ. ಶುಗರ್ ಕೊಟೇಡ್ ಯೂರಿಯಾ ತುಂಬಿದೆ ಎಂದು ತಿರುಗೇಟು ನೀಡಿದ್ರು.

ಒಟ್ಟಾರೆ ಇಬ್ಬರು ನಾಯಕರ ಮಾತಿನ ಕಿತ್ತಾಟ ರಾಜ್ಯದ ಜನರಿಗೆ ಮನರಂಜನೆಯನ್ನಂತೂ ನೀಡುತ್ತಿದೆ.

Leave a Reply