“ಹೀಗೊಂದು ದಿನ” ಸಿಂಧೂ ಲೋಕನಾಥ ಅಭಿನಯದ ನೂತನ ಸಿನಿಮಾವಾಗಿದ್ದು, ಇದೊಂದು ಮಹಿಳಾ ಪ್ರಧಾನ ಚಿತ್ರವೆಂಬುದು ಇನ್ನೂ ವಿಶೇಷ. ವಿಕ್ರಮ್ ಯೋಗಾನಂದ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದು, ವಿಕಾಸ್ ಕಥೆಯನ್ನು ಹೆಣೆದಿದ್ದಾರೆ. ಚಿತ್ರದ ಬಹುಮುಖ್ಯ ವಿಶೇಷತೆ ಅಂದ್ರೆ ಇದು ಅನ್ ಕಟ್ ಸಿನಿಮಾ. ಸುಮಾರು 2 ಗಂಟೆಯ ಕಥೆಯ ಅನ್ ಕಟ್ ಮಾದರಿಯಲ್ಲಿ ತೋರಿಸಿದ್ದಾರೆ.
ಮಹಿಳಾ ದಿನದ ವಿಶೇಷವಾಗಿಯೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು ಆದರೆ ಯು.ಎಫ್,ಓ ಹಾಗೂ ಕ್ಯೂಬ್ ನ ವಾದ ವಿವಾದಗಳಿಗೆ ಸಂಭಂದಪಟ್ಟಂತೆ ಬಿಡುಗಡೆ ಮುಂದಕ್ಕೆ ಹೋಗಿದೆ. ಹೀಗಾಗಿ ಪ್ರೇಕ್ಷಕರ ವಲಯದಲ್ಲೊಂದು ಕುತೂಹಲ ಮೂಡಿಸಿದೆ.
‘ಹೀಗೊಂದು ದಿನ’ ಚಿತ್ರ ಎರಡು ಗಂಟೆಯಲ್ಲಿ ನಡೆಯುವ ಕಥೆ. ಕಥೆಯಲ್ಲಿ ನಾಯಕಿಯ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗಿನ ಸನ್ನಿವೇಶವನ್ನು ಹೊಂದಿದೆ. ಹೀಗಾಗಿ ಚಿತ್ರೀಕರಣವನ್ನು ಬೆಳಗಿನ ಜಾವ 6 ಗಂಟೆಯಿಂದ 8 ಗಂಟೆಯ ಮಧ್ಯ ಭಾಗದಲ್ಲಿ ಶೂಟ್ ಮಾಡಲಾಗಿದೆ. ಒಂದು ಗುರಿಯಿಟ್ಟಕೊಂಡು ಚಿತ್ರದ ನಾಯಕಿ ಮನೆಯಿಂದ ಹೊರಗೆ ಬರುತ್ತಾಳೆ. ಈ ಎರಡು ಗಂಟೆಯಲ್ಲಿ ನಾಯಕಿ ಯಾವ ತೊಂದರೆಗಳನ್ನು, ಕಷ್ಟಗಳನ್ನು ಎದುರಿಸ್ತಾಳೆ ಎಂಬುವುದು ಕಥೆಯ ತಿರುಳು.